ನಮ್ಮತುಮಕೂರು ವಿಶೇಷ ವರದಿ: ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಶಾಲಾ ಮಕ್ಕಳಲ್ಲಿ ದಿಢೀರನೆ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತಿದ್ದವು ಪೋಷಕರಲ್ಲಿ ಆತಂಕ ಮನೆ ಮಾಡಿದೆ.
ತುಮಕೂರು ಜಿಲ್ಲೆ ತುರುವೇಕೆರೆ ಹಾಗೂ ಕೊರಟಗೆರೆಯಲ್ಲಿ ಗ್ರಾಮದಲ್ಲಿ ಶಾಲಾ ಮಕ್ಕಳಲ್ಲಿ ಚರ್ಮದ ಫಂಗಸ್ ಕಂಡುಬಂದಿದ್ದು ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.
ಕೊರಟಗೆರೆ ತಾಲ್ಲೂಕಿನ ಯಲಚೇಗೆರೆ, ತುರುವೇಕೆರೆ ತಾಲ್ಲೂಕಿನ ಕುಣಿಕೇನಹಳ್ಳಿಯಲ್ಲಿ ಘಟನೆ ನಡೆದಿದೆ. ಕುಣಿಕೇನಹಳ್ಳಿಯ ಗ್ರಾಮದ 21 ಮಕ್ಕಳಲ್ಲಿ ಕಪ್ಪು ಚುಕ್ಕೆಗಳು ಕಾಣಿಸಿಕೊಂಡಿವೆ. ಯಲಚೇನಹಳ್ಳಿ ಗ್ರಾಮದ 5 ಮಕ್ಕಳಲ್ಲಿ ಮಚ್ಚೆಗಳು ಗೋಚರಿಸಿದ್ದು ಮಕ್ಕಳ ಅಂಗಾಲು – ಅಂಗೈಲ್ಲಿ ಕಪ್ಪು ಚುಕ್ಕೆಗಳು ಕಾಣಿಸಿಕೊಂಡಿವೆ.
ಕಳೆದ ಶನಿವಾರದಿಂದ ಕಪ್ಪು ಚುಕ್ಕಿಗಳು ಕಾಣಿಸಿಕೊಂಡಿದ್ದು ಶಾಲೆಯಿಂದ ಮನೆಗೆ ಮಕ್ಕಳು ವಾಪಸ್ ಬಂದ ಬಳಿಕ ಕಾಣಿಸಿಕೊಂಡಿವೆ. ಶಾಲೆಯ ಶಿಕ್ಷಕನಿಗೂ ಕಾಣಸಿಕೊಂಡ ಮಚ್ಚೆಗಳು ಇದ್ದು, ಮಕ್ಕಳ ಪಾದದಲ್ಲಿ ಕಾಣಿಸಿಕೊಂಡ ಕಪ್ಪು ಚುಕ್ಕೆಯಿಂದ ಪೋಷಕರು ಆತಂಕಗೊಂಡಿದ್ದಾರೆ.
ಶಾಲೆಗೆ ಭೇಟಿ ಕೊಟ್ಟ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ವೈದ್ಯರ ತಂಡವು, ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಈ ಕುರಿತಂತೆ ಸ್ಪಷ್ಟನೆ ನೀಡಿರುವ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಶಾಲಾ ಆವರಣದ ಸಮೀಪ ತಿಪ್ಪೇಗುಂಡಿ ಇದ್ದು, ಅದರಿಂದ ಹೊರ ಬರುತ್ತಿರುವಂತಹ ಸಣ್ಣ ಹುಳುಗಳು ಈ ರೀತಿ ಮಕ್ಕಳಲ್ಲಿ ಇನ್ಫೆಕ್ಷನ್ ಬರಲು ಕಾರಣವಾಗಿದೆ. ಕುರಿತಂತೆ ತಾಲೂಕು ವೈದ್ಯಾಧಿಕಾರಿಗಳು ಕೂಡ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಯಾವುದಕ್ಕೂ ಮುಂಜಾಗ್ರತಾ ಕ್ರಮವಾಗಿ ಶಾಲಾ ಸುತ್ತಮುತ್ತಲ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾದಂತ ಅಗತ್ಯವಿದ್ದು ತಿಪ್ಪೆ ಗುಂಡಿಯನ್ನು ಬೇರೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA