ತುಮಕೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ವತಿಯಿಂದ ಶಶಿ ಕೆ. ತುಮಕೂರು ಇವರಿಂದ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ತುಮಕೂರಿನ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಶಶಿ ಕೆ. ಇವರ ಚಿತ್ರಕಲೆಯು ತುಂಬಾ ಅತ್ಯುತ್ತಮವಾಗಿದೆ. ಈ ಪ್ರತಿಭೆಯು ತನ್ನ ಕಲೆಯನ್ನು ಇನ್ನೂ ಹೆಚ್ಚಾಗಿ ಮತ್ತು ಉತ್ತಮವಾಗಿ ಬೆಳೆಸಿಕೊಳ್ಳಲಿ. ಹಣಕ್ಕೆ ಬೆಲೆ ಇಲ್ಲ. ಪ್ರತಿಭೆಗೆ ಬೆಲೆಯನ್ನು ನೀಡೋಣ. ಭಾವನೆಗಳನ್ನು ಗೆರೆಗಳಾಗಿ ಬರೆದು, ಬಣ್ಣಗಳನ್ನು ಚೆಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದಾದರೆ, ಗುಡಿಸಿಲಲ್ಲಿ ಅರಳಿದ ಹೂವು ಎಂದು ಹೇಳಿ ಕಲಾವಿದರನ್ನು ಪ್ರೋತ್ಸಾಹಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್ ಮಾತನಾಡಿ, ಶಶಿ ಕೆ. ಅವರು ಬಿಡಿಸಿರುವ ಚಿತ್ರಗಳಲ್ಲಿ ಅವರ ಬಡತನ ಅವರ ಭಾವನೆಗಳು ವ್ಯಕ್ತವಾಗುತ್ತಿದೆ. ಜಾನಪದ ಶೈಲಿಯನ್ನು ಕೂಡ ನೋಡಬಹುದಾಗಿದೆ. ಚಿತ್ರಕಲಾವಿದರು ನಿರಾಶರಾಗಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯದಾಗಲಿ ಎಂದು ಅವರು ಆಶೀರ್ವಾದಿಸಿದರು.
ಚಿತ್ರಕಲಾ ಶಿಕ್ಷಕ ಡಿ.ಭೂತಯ್ಯನವರು ಮಾತನಾಡಿ, ಗುಡಿಸಲಿನಲ್ಲಿದ್ದರೂ, ಇನ್ನೂ ದೊಡ್ಡದಾಗಿ ಈ ಪ್ರತಿಭೆಯು ಬೆಳೆಯಲಿ. ನನ್ನ ವಿದ್ಯಾರ್ಥಿಗಳಾದ ಶಶಿ ಕೆ., ನಾಗೇಶ್ ವಿ., ಜೈಲಕಾ ಮತ್ತು ಸತ್ಯ ಇಂತಹ ಪ್ರತಿಭೆಗಳಿಗೆ ಇನ್ನೂ ಹೆಚ್ಚು ಅವಕಾಶಗಳನ್ನು ಮಾಡಿಕೊಡಬೇಕು. ಇನ್ನೂ ಹೆಚ್ಚು ಕಲೆಗಳನ್ನು ಬೆಳೆಸೋಣ ಎಂದು ಪ್ರೋತ್ಸಾಹಿಸಿದರು.
ನಿವೃತ್ತ ಶಿಕ್ಷಕ ಎಂ.ಎನ್.ಸುಬ್ರಹ್ಮಣ್ಯ ಅವರು ಮಾತನಾಡಿ, ಕಲಾವಿದರು ಮೊದಲು ತಮ್ಮ ಅಭಿಪ್ರಾಯಗಳನ್ನು ಗಮನಿಸಬೇಕು ಆಗ ಮಾತ್ರ ಬೇರೆಯವರು ಗೌರವಿಸುತ್ತಾರೆ ಎಂದು ಉತ್ತೇಜಿಸಿದರು.
ಸರ್ಕಾರಿ ಚಿತ್ರಕಲಾ ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ.ಭಾರಕೇರ ಮಾತನಾಡಿ, ಪ್ರತಿಭೆಯು ಯಾರ ಸ್ವತ್ತಲ್ಲ. ಪ್ರತಿಭೆ ಗುಡಿಸಲಿನಲ್ಲಿ ಹುಟ್ಟುತ್ತದೆ. ಅರಮನೆಯಲ್ಲಿ ಸಾಯುತ್ತದೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ಹೆಣ್ಣು ಪ್ರಕೃತಿ ಮಾತೆ ನಮಗೆ ಮಾರ್ಗದರ್ಶಕ. ಇವರಿಗೆ ಪ್ರಾಣಿ ಪಕ್ಷಿಗಳ ಬಗ್ಗೆ ಎಷ್ಟೋ ಪ್ರೀತಿಯಿಂದ ಈ ಕಲೆಯಲ್ಲಿ ನೋಡಬಹುದು ಎಂದು ತಿಳಿಸಿದರು.
ರವೀಂದ್ರ ಕಲಾನಿಕೇತನದ ಉಪನ್ಯಾಸಕ ಪ್ರಭು ಅರಸೂರು ಮಾತನಾಡಿ, ಅವಳು ಬದುಕನ್ನು ನೋಡಬಹುದು, ಸಂಗೀತ ಹಾಡಿನ ಮೂಲಕ ವ್ಯಕ್ತಪಡಿಸುತ್ತಾರೆ. ಕಲಾವಿದರು ಗೆರೆಗಳ ಮುಖಾಂತರ ವ್ಯಕ್ತಪಡಿಸುತ್ತಾರೆ. ನಮ್ಮ ಬದುಕು ನಿಮ್ಮ ಕೈಯಲ್ಲಿದೆ ಪ್ರಯತ್ನವಿಲ್ಲದೆ, ಫಲವಿಲ್ಲವೆಂದು ಇನ್ನೂ ಹೆಚ್ಚಾಗಿ ಕಲಾವಿದೆಯಾಗಿ ಬೆಳೆಯಲು ಪ್ರೋತ್ಸಾಹಿಸಿದರು.
ಶಶಿ ಕೆ. ಅವರು ಮಾತನಾಡಿ, ಪ್ರಕೃತಿ ಮತ್ತು ನಾನು ಎಂಬ ವಿಷಯದಲ್ಲಿ ಇಷ್ಟು ಚಿತ್ರಕಲೆ ಮಾಡಿದ್ದೇನೆ ಮತ್ತು ಪ್ರಕೃತಿಯಲ್ಲಿ ಹೆಣ್ಣಿಗೆ ಯಾವ ಸ್ಥಾನವಿದೆ ಎಂಬುದರ ಬಗ್ಗೆ ಚಿತ್ರಕಲೆ ಮಾಡಿದ್ದೇನೆ. ಹುಳವು ಹೇಗೆ ಹಂತ ಹಂತವಾಗಿ ಬೆಳೆದು ಬಣ್ಣದ ಚಿಟ್ಟೆಯಾಗಿ ಪ್ರಕೃತಿಯಿಂದ ಹೊರ ಬರುತ್ತದೆಯೋ ಹಾಗೆ ನನ್ನ ಭಾವನೆಗಳೂ ಕೂಡ ಬಣ್ಣಗಳ ಮುಖಾಂತರ ಕಲೆಯಾಗಿ ಹೊರ ಬಂದಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700