ತುಮಕೂರು: ಹನಿಟ್ರ್ಯಾಪ್ ಮಾಡಲು ಬಂದಿದ್ದ ಇಬ್ಬರು ಹುಡುಗಿಯರು ಸಚಿವ ರಾಜಣ್ಣ ಅವರ ಬೆಂಗಳೂರಿನ ಮನೆಯ ಬಳಿ ಬಂದು ʼನಿಮ್ಮ ಬಳಿ ಏನೋ ಗುಪ್ತವಾಗಿ ಮಾತನಾಡಬೇಕಿದೆʼ ಎಂದಿದ್ದಳು.
ಈ ಬಗ್ಗೆ ಸ್ವತಃ ರಾಜಣ್ಣ ಅವರೆ ಹೇಳಿಕೆ ನೀಡಿದ್ದು, ಎರಡು ಬಾರಿ ನನ್ನನ್ನು ಭೇಟಿಯಾಗಿದ್ದರು. ʼಮೊದಲ ದಿನ ಒಬ್ಬ ಹುಡುಗ ಬಂದಿದ್ದ, ಎರಡು ಸಲವೂ ಹುಡುಗ ಅವನೇ ಆಗಿದ್ದ, ಆದ್ರೆ ಎರಡೂ ಸಲ ಹೆಣ್ಣು ಮಕ್ಕಳು ಬೇರೆ ಬೇರೆ ಇದ್ದರು. ಹುಡುಗಿಯರು ಒಂದು ಜೀನ್ಸ್ ಬ್ಲೂ ಟಾಪ್ ಹಾಕಿದ್ದರು. ಹುಡುಗಿಯು ಹೈಕೋರ್ಟ್ ಲಾಯರ್ ಎಂದು ಹೇಳಿಕೊಂಡಿದ್ದರುʼ ಎಂದಿದ್ದಾರೆ.
ಮೊದಲು ಬಂದಾಗ ಹೈಕೋರ್ಟ್ ಲಾಯರ್ ಎಂದು ಹೇಳಿರಲಿಲ್ಲ. ಎರಡನೇ ಬಂದಾಗ ಲಾಯರ್ ಎಂದು ಹೇಳಿಕೊಂಡಿದ್ದಳು. ಯಾವುದೆ ಪ್ರಕರಣದ ಬಗ್ಗೆ ಮಾತನಾಡಲು ಅಲ್ಲ, ಬದಲಾಗಿ ನಿಮ್ಮ ಬಳಿ ಏನೋ ಗುಪ್ತವಾಗಿ ಮಾತನಾಡಬೇಕಿದೆ ಎಂದು ಹೇಳಿದ್ದಳು. ಅವರ ಪೋಟೋ ತೋರಿಸಿದರೆ ಗುರುತು ಹಿಡಿಯುತ್ತೇನೆ. ಈ ಕುರಿತಂತೆ ಎಲ್ಲವೂ ದೂರಿನಲ್ಲಿ ಬರೆದಿದ್ದೇನೆ ಎಂದರು.
ಗೃಹಮಂತ್ರಿಗೆ ದೂರು ಕೊಡುತ್ತೇನೆ, ಆ ದೂರಿನಲ್ಲಿ ಯಾವ್ದೆ ಮೆಟಿರಿಯಲ್ ಎವಿಡೆನ್ಸ್ ಇಲ್ಲ. ಅಲ್ಲದೆ ಬೆಂಗಳೂರಿನ ಮನೆಯಲ್ಲಿ ಸಿಸಿ ಕ್ಯಾಮೆರಾಗಳೇ ಹಾಕಿಲ್ಲ ಎಂದರು.ಅವತ್ತು ಯಾರು ಮನೆಗೆ ಬಂದು ಹೋಗಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದಿದ್ದೇನೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4