ನವದೆಹಲಿ: ಶಿವಸೇನೆಯ ಏಕನಾಥ್ ಶಿಂಧೆ ಬಣಕ್ಕೆ ಎರಡು ಖಡ್ಗಗಳು ಮತ್ತು ಶೀಲ್ಡ್ ಚಿಹ್ನೆಯನ್ನು ಚುನಾವಣಾ ಆಯೋಗ ಹಂಚಿಕೆ ಮಾಡಿದೆ. ಅವರಿಗೆ ನಿನ್ನೆ ಬಾಳಾಸಾಹೇಬಂಚಿ ಶಿವಸೇನಾ ಎಂಬ ಹೆಸರನ್ನು ನೀಡಲಾಯಿತು.
ಕೆಲ ದಿನಗಳ ಹಿಂದಷ್ಟೇ ಕೇಂದ್ರ ಚುನಾವಣಾ ಆಯೋಗದಿಂದ ಶಿವಸೇನೆಯ ಏಕನಾಥ್ ಶಿಂಧೆ ಹಾಗೂ ಉದ್ಧವ್ ಠಾಕ್ರೆ ಅವರಿಗೆ ನೀಡಲಾಗಿದ್ದಂತ ಬಿಲ್ಲು-ಬಾಣದ ಚಿನ್ಹೆಯನ್ನು ರದ್ದುಗೊಳಿಸಿತ್ತು. ಈ ಬಳಿಕ, ಏಕನಾಥ ಶಿಂಧೆಯಿಂದ ಹೊಸ ಚಿಹ್ನೆ ನೀಡೋದಕ್ಕೆ ಆಯೋಗಕ್ಕೆ ಮನವಿ ಮಾಡಲಾಗಿತ್ತು.
ಈ ಬೆನ್ನಲ್ಲೇ ಇಂದು ಚುನಾವಣಾ ಆಯೋಗದಿಂದ ಶಿವಸೇನೆಯ ಏಕನಾಥ ಶಿಂಧೆ ಅವರ ಬಣಕ್ಕೆ ಎರಡು ಖಡ್ಗ ಗಳು ಮತ್ತು ಶೀಲ್ಡ್ ಚಿಹ್ನೆಯನ್ನು ಲಾಂಛನವಾಗಿ ಹಂಚಿಕೆ ಮಾಡಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy