ತುಮಕೂರು: ಪಲ್ಸ್ ಪೋಲಿಯೋ ದಿನದ ಅಂಗವಾಗಿ ಇಂದು ಶಿರಾ ನಗರದಲ್ಲಿರುವ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶಾಸಕರಾದ ಟಿ.ಬಿ.ಜಯಚಂದ್ರ ಅವರು ಹಾಗೂ ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ.ಗೌಡರವರು ಪಲ್ಸ್ ಪೋಲಿಯೋ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮ ಕುರಿತು ಮಾತನಾಡಿದ ವಿಧಾನ ಪರಿಷತ್ ಶಾಸಕರಾದ ಚಿದಾನಂದ ಗೌಡ, ಪೋಲಿಯೋ ಲಸಿಕೆಯನ್ನು ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಹಾಕಿಸುವುದರ ಮೂಲಕ ದೇಶಾದ್ಯಂತ ಅಂಗವಿಕಲತೆಯನ್ನು ದೂರ ಬಿಡಬೇಕು ಎಂದು ಕರೆ ಕೊಟ್ಟರು. ನಮ್ಮ ಭಾರತ ಸರ್ಕಾರವು ಸುಭಿಕ್ಷವಾಗಿ, ಸುಭದ್ರವಾಗಿದೆ ಎಂಬುದಕ್ಕೆ ಇಂತಹ ಪೋಲಿಯೋ ಲಸಿಕೆ ಕಾರ್ಯಕ್ರಮ ವಾಗಿರಬಹುದು ಹಾಗೂ ಕೋವಿಡ್ ಸಂದರ್ಭದಲ್ಲಿ ನೀಡಿದ ಲಸಿಕೆಯಾಗಿರಬಹುದು. ದೇಶದ ಎಲ್ಲಾ ಜನರಿಗೂ ಕೂಡ ಸಂಪೂರ್ಣ ಎರಡು ಡೋಸ್ ನೀಡುವುದರ ಮೂಲಕ ಭಾರತ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ರೋಗರು ಜನಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ಮಾಸ್ ಲಸಿಕಾ ಕಾರ್ಯಕ್ರಮಗಳನ್ನ ಕೈಗೊಳ್ಳುತ್ತಿರುವುದು ನಮ್ಮ ದೇಶದ ಹೆಮ್ಮೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಪೂಜಾ ಪೆದ್ದರಾಜು, ತಾಲೂಕು ದಂಡಾಧಿಕಾರಿಗಳಾದ ಡಾ.ದತ್ತಾತ್ರೇಯ, ನಗರಸಭೆ ಆಯುಕ್ತರಾದ ರುದ್ರೇಶ್, ಹಿರಿಯ ವೈದ್ಯರಾದ ರಾಮಕೃಷ್ಣಪ್ಪ, ನಗರ ಸಭೆ ಸದಸ್ಯರಾದ ಉಮಾ ವಿಜಯರಾಜ್, ತಾಲೂಕು ವೈದ್ಯಾಧಿಕಾರಿಗಳಾದ ಸಿದ್ದೇಶ್, ಆಡಳಿತಾಧಿಕಾರಿಗಳಾದ ಡಿ.ಎಂ.ಗೌಡ್ರು, ಶ್ರೀನಾಥ್, ತಾಲೂಕು ಮಂಡಲ ಅಧ್ಯಕ್ಷರಾದ ಚಿಕ್ಕಣ್ಣ, ಮುಖಂಡರಾದ ರಮೇಶ್, ರಾಘವೇಂದ್ರ, ಸಂತೆಪೇಟೆ ನಟರಾಜ್, ವಿಜಯರಾಜ್, ಸಿದ್ದಲಿಂಗಪ್ಪ, ಪತ್ರಿಕಾ ಮಿತ್ರರು ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.