ಪಾವಗಡ: ಪಟ್ಟಣದ ಅಗಸರ ಕುಂಟೆ ಕಟ್ಟೆಯಿಂದ ನೀರು ಹೊರ ಬರುತ್ತಿದ್ದು, ಇದೀಗ ಸಾರ್ವಜನಿಕರಲ್ಲಿ ಆತಂಕವನ್ನು ಮೂಡಿಸಿದೆ. ಅಗಸರ ಕುಂಟೆಗೆ ನಾಗಲಮಡಿಕೆಯಿಂದ ನೀರು ಹರಿಸುವ ಸಂದರ್ಭದಲ್ಲಿ ಕಟ್ಟೆಯನ್ನು ಸಮರ್ಪಕವಾಗಿ ದುರಸ್ತಿ ಮಾಡದೆ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಸಮಸ್ಯೆಗಳು ಆರಂಭವಾಗಿದೆ ಎಂದು ವರದಿಯಾಗಿದೆ.
ಕುಂಟೆ ಸಮೀಪವಿರುವ ಶಾಲೆ, ಕಾಲೇಜು ಕಟ್ಟಡಗಳ ಬಳಿಯಲ್ಲಿ ನೀರು ಹರಿಯುತ್ತಿದ್ದು, ಕೆಲವರು ಮನೆ, ಶೌಚಾಲಯಗಳು ಕುಸಿದು ಬೀಳುವ ಆತಂಕವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಕುಂಟೆಯಲ್ಲಿ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್ ಬಾಗಿದೆ. ಟ್ಯಾಂಕ್ ಪಿಲ್ಲರ್‌ಗಳು ಶಿಥಿಲವಾಗಿದೆ. ಟ್ಯಾಂಕ್ ಕುಂಟೆಯೊಳಗೆ ಬಿದ್ದರೆ ರಭಸಕ್ಕೆ ಕಟ್ಟೆ ಒಡೆದು ಭಾರಿ ಅನಾಹುತ ಸಂಭವಿಸಲಿದೆ ಎಂದು ಇಲ್ಲಿನ ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಬಗ್ಗೆ ತಕ್ಷಣವೇ ಮುಂಜಾಗೃತ ಕ್ರಮಕೈಗೊಂಡು ಕಟ್ಟೆಯನ್ನು ದುರಸ್ತಿ ಮಾಡಿಸುವ ಮೂಲಕ ಸಂಭಾವ್ಯ ಅನಾಹುತವನ್ನು ತಪ್ಪಿಸಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700