ಈ ಬಾರಿ ಅರಬ್ಬೀ ಸಮುದ್ರದಲ್ಲಿ 100 ಕೆಜಿಗೂ ಅಧಿಕ ಭಾರದ ಹರಳಿನ ಶಿವಲಿಂಗವೊಂದು ಮೀನುಗಾರರ ಬಲೆಗೆ ಬಿದ್ದಿದ್ದು ನೆರೆದವರು ಒಂದು ಕ್ಷಣ ಗಾಬರಿಯಾದರು.
ಇಂತಹ ಘಟನೆ ನಡೆದಿದ್ದು ಭರೂಚ್ ಜಿಲ್ಲೆಯ ಜಂಬೂಸರ್ ತಾಲೂಕಿನ ಕವಿ ಗ್ರಾಮದಲ್ಲಿ. ಮೀನುಗಾರರ ಬಲೆಯಲ್ಲಿ 100 ಕೆಜಿಗೂ ಅಧಿಕ ತೂಕದ ಎರಡೂವರೆ ಅಡಿ ಎತ್ತರದ ಶಿವಲಿಂಗ ಕಂಡು ಅಲ್ಲಿನ ಜನ ತೀವ್ರ ಆಶ್ಚರ್ಯಕ್ಕೊಳಗಾದರು. ಛಗನ್ ಸೋಮ ವಘೇಲಾ ಅವರಿಗೆ ಸೇರಿದ ದೋಣಿಯಲ್ಲಿ ಕಾಳಿದಾಸ್ ವಘೇಲಾ, ಮಂಗಲ್ ಕಾಳಿದಾಸ್ ಫಕೀರಾ ಸೇರಿದಂತೆ ಸುಮಾರು 12 ಮಂದಿ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಬಲೆ ಹಾಕಿದ್ದರು. ಈ ವೇಳೆ ಬಲೆಗೆ 100 ಕೆಜಿ ತೂಕದ ವಸ್ತುವೊಂದು ಸಿಕ್ಕಿಹಾಕಿಕೊಂಡಿತ್ತು. ಮೇಲಕ್ಕೆತ್ತಿ ನೋಡಿದಾಗ ಶಿವಲಿಂಗ ಸಿಲುಕಿದೆ.
ಮೀನುಗಾರರು ಬಲೆಯನ್ನು ಎಳೆಯಲು ಪ್ರಯತ್ನ ಪಟ್ಟಾಗ ಹೆಚ್ಚಿನ ಭಾರ ಇರುವುದು ಕಂಡುಬಂದಿದ್ದು, 100 ಕೆಜಿ ತೂಕದ ಮೀನ ಸಿಕ್ಕಿರಬಹುದೇ ಎಂದು ಅನುಮಾನಗೊಂಡರು.ಕಠಿಣ ಪರಿಶ್ರಮದ ಬಳಿಕ ಬಲೆಯನ್ನು ಸಮುದ್ರ ದಡಕ್ಕೆ ತಂದು ನೋಡಿದಾಗ ಬಲೆಯಲ್ಲಿ ಶಿವಲಿಂಗ ಪತ್ತೆಯಾಗಿದೆ.
ಶಿವಲಿಂಗ ಸಿಕ್ಕಿರುವ ಈ ಸುದ್ದಿ ತಿಳಿಯುತ್ತಿದ್ದಂತೆ ಈ ವಿಸ್ಮಯ ನೋಡಲು ಹತ್ತಿರದ ಊರಿನಿಂದ ಜನ ತಂಡೋಪತಂಡವಾಗಿ ಭರೂಚ್ ಗೆ ಆಗಮಿಸಿದರು. ಕೊನೆಗೆ ಜನರನ್ನು ನಿಯಂತ್ರಿಸಲು ಪೊಲೀಸರನ್ನೇ ನಿಯೋಜಿಸ ಬೇಕಾದ ಅನಿವಾರ್ಯತೆಯೂ ಎದುರಾಯಿತು. ಈ ವಿಚಾರ ತಿಳಿಯುತ್ತಿದ್ದಂತೆ ಭರೂಚ್ ಗೆ ತೆರಳಿದ ಜಿಲ್ಲಾಡಳಿತ ಈ ಶಿವಲಿಂಗವನ್ನು ಯಾವ ಶಿಲೆಯಿಂದ ನಿರ್ಮಿಸಲಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದನ್ನು ತಯಾರಿಸಿದ ಕಲ್ಲು ಹತ್ತಿರದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಸಲಾಗುತ್ತಿದೆ.


