ತುಮಕೂರು: ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ತುಮಕೂರು ಜಿಲ್ಲಾಶಾಖೆ ವತಿಯಿಂದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 395ನೇ ಜಯಂತ್ಯುತ್ಸವವನ್ನು ಮರಾಠ ಕ್ಷತ್ರಿಯ ಸಮಾಜ ಕಚೇರಿ ಆವರಣದಲ್ಲಿ ಆಚರಿಸಲಾಯಿತು.
ಬಿಜಿಎಸ್ ವೃತ್ತದಿಂದ ಜಾನಪದ ಕಲಾತಂಡದೊಂದಿಗೆ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿಗಳು ದಿವ್ಯ ಸಾನಿಧ್ಯವಹಿಸಿದ್ದರು. ಎಸ್. ಸುರೇಶ್ ರಾವ್ ಸಾಠೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಜ್ಯೋತಿಗಣೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿ ವೇತನ ವಿತರಿಸಿದರು.
ಟಿ.ಆರ್.ವೆಂಕಟರಾವ್ ಚವಾಣ್, ಜನಾರ್ಧನ್ ರಾವ್ ಸೋನಾಲೆ, ಶ್ರೀನಿವಾಸ್ ರಾವ್ ಸಾಳಂಕೆ, ಟಿ.ಆರ್.ಸುನೀಲ್ ಚವಾಣ್, ಟಿ.ಎಲ್.ಸುರೇಶ್ ರಾವ್ ಸೋನಾಲೆ, ಎಸ್.ಪಿ.ಚಿದಾನಂದ್, ಶ್ರೀನಿವಾಸರಾವ್ ಮಗಾರ್, ವಿಷ್ಣುವರ್ಧನ್, ಮಹಮ್ಮದ್ ಜಿಯಾವುಲ್ಲಾ, ದನಿಯಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz