ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಿದ್ದ ವೇಳೆ ಮಾಜಿ ಶಾಸಕರೊಬ್ಬರಿಗೆ ಹೋರಿಯೊಂದು ತಿವಿದಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ದೀಪಾವಳಿ ಪ್ರಯುಕ್ತ ಎರಡು ದಿನಗಳ ಹಿಂದೆ ಬಳ್ಳಿಗಾವಿಯಲ್ಲಿ ಸಾಂಪ್ರಾದಾಯಿಕ ಗ್ರಾಮೀಣ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧೆಯನ್ನು ವೀಕ್ಷಿಸಲು ಶಿಕಾರಿಪುರದ ಮಾಜಿ ಶಾಸಕ ಮಹಾಲಿಂಗಪ್ಪ ತೆರಳಿದ್ದರು. ಮನೆಯೊಂದರ ಬಾಗಿಲ ಮುಂದೆ ಹೋರಿ ಬೆದರಿಸುವ ಸ್ಪರ್ಧೆ ನೋಡುತ್ತಾ ನಿಂತಿದ್ದಾಗ ಅಲ್ಲಿಗೆ ಬಂದ ಹೋರಿ, ಒಂದೆರಡು ಬಾರಿ ಮಹಾಲಿಂಗಪ್ಪ ಅವರನ್ನು ತಿವಿದು ಎತ್ತಿಹಾಕಿದೆ. ಸಣ್ಣಪುಟ್ಟ ಗಾಯಗಳಿಂದ ಮಹಾಲಿಂಗಪ್ಪ ಚೇತರಿಸಿಕೊಂಡಿದ್ದಾರೆ.
ಮನೆಯೊಂದರ ಬಾಗಿಲತ್ತ ಓಡುತ್ತಿದ್ದ ಮಹಾಲಿಂಗಪ್ಪ ಅವರಿಗೆ ಹೋರಿ ಬಿಳಿ ಬೂದು ಬಣ್ಣದ ಹೋರಿ ಎರಡು ಬಾರಿ ಕೊಂಬಿನಿಂದ ತಿವಿದಿದ್ದೆ. ತದನಂತರ ಅವರು ಅಂಗಾತ ಮಲಗಿದ್ದಾರೆ. ನಂತರ ಹೋರಿ ಅಲ್ಲಿಂದ ಬೇರೆಡೆಗೆ ಓಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಜಿ ಶಾಸಕರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



