ಮೈಸೂರು: ತಾಯಾಣೆಗೂ ನಾನು ಮತ್ತು ಅಪ್ಪು ಎಂದಿಗೂ ಜಗಳವಾಡಿಲ್ಲ, ನೋವಿನ ಜೊತೆ ತಮ್ಮನನ್ನು ಜೀವಂತವಾಗಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಿವರಾಜ್ ಕುಮಾರ್ ಭಾವುಕ ನುಡಿಗಳನ್ನಾಡಿದರು.
ನಗರದ ಶಕ್ತಿಧಾಮಕ್ಕೆ ಇಂದು ಭೇಟಿ ನೀಡಿ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಳುವುದರಿಂದ ಅಪ್ಪುವನ್ನು ಕಳೆದುಕೊಂಡು ಬಿಡುತ್ತೇವೆ. ಅವನನ್ನು ಜೊತೆಯಲ್ಲಿಟ್ಟುಕೊಂಡು ಬದುಕಬೇಕು. ಅಪ್ಪು ಕಣ್ಣುಗಳು ಇವತ್ತು ಸಮಾಜ ನೋಡುತ್ತಿವೆ. ಇಡೀ ಕರುನಾಡಿನ ನೈತಿಕ ಬೆಂಬಲ ನಮ್ಮ ಕುಟುಂಬಕ್ಕೆ ಸಿಕ್ಕಿದೆ ಎಂದು ಅವರು ಹೇಳಿದರು.
ಶಕ್ತಿಧಾಮವನ್ನು ಇನ್ನೂ ಚೆನ್ನಾಗಿ ನಡೆಸಿಕೊಂಡು ಹೋಗಬೇಕು. ಎರಡು ಮೂರು ವಾರದಲ್ಲಿ ಶಕ್ತಿಧಾಮದಲ್ಲಿ ಶಾಲೆ ನಿರ್ಮಾಣದ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700