ಸರಗೂರು: ತಾಲ್ಲೂಕು ರಾಷ್ಟ್ರೀಯ ಹಬ್ಬ ಸಮಿತಿ ವತಿಯಿಂದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಚಲುವರಾಜು, ಶಿವಯೋಗಿ ಸಿದ್ದರಾಮೇಶ್ವರರವರು 12 ನೇ ಶತಮಾನದಲ್ಲಿ ಬಸವಣ್ಣರವರ ಕಾಲದಲ್ಲಿ ವಚನಕಾರವಾಗಿದ್ದರು ಎಂದು ಸಿದ್ದರಾಮೇಶ್ವರ ಇತಿಹಾಸವನ್ನು ವಿವರಿಸಿದರು.
ಇದೇ ವೇಳೆ ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ನಾಗರಾಜು. ವಕೀಲರಾದ ಚೌಡಹಳ್ಳಿ ಜವರಯ್ಯ, ಶಿಕ್ಷಕರಾದ ಕೆ.ಸಿ.ಕೋಡಯ್ಯ, ಶಿವಯೋಗಿ ಸಿದ್ದರಾಮೇಶ್ವರ ಅವರ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಾರಾಯಣ, ಕಾರ್ಯಾಧ್ಯಕ್ಷ ಬೋಜಯ್ಯ, ಪಟ್ಟಣ ಪಂಚಾಯಿತಿ ಸದಸ್ಯೆ ಹೇಮಾವತಿರಮೇಶ, ಮಹದೇವ, ಹನುಮಬೋವಿ, ಚಲುವರಾಜು, ವೀರಭದ್ರ ಸಿದ್ದಪುರ ವೆಂಕಟರಾಮ, ಶೀರಾದ್ದಾರ್ ಹರೀಶ್, ಗುರುರಾಜು, ರಾಜನಿರೀಕ್ಷಕರು ಮುಜೀಪ್, ರವಿಚಂದ್ರ ಹಾಗೂ ಭೋವಿ ಸಮುದಾಯ ಕಾರ್ಯಕರ್ತರು ಹಾಗೂ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy