ಕೊಪ್ಪಳ: ದತ್ತಪೀಠದ ಹೆಸರಲ್ಲಿ ಸಂಸದ, ಶಾಸಕರಾಗಿ ಅಧಿಕಾರಕ್ಕೆ ಬಂದವರು ಈಗೇನು ಮಾಡುತ್ತಿದ್ದಾರೆ ? ಅಲ್ಲಿ ಮುಸ್ಮಾನರು ನಮಾಜು ಮಾಡ್ತಾರೆ, ಮಾಂಸದ ಊಟ ಮಾಡ್ತಾರೆಂದರೇ ಏನರ್ಥ ? ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದತ್ತಪೀಠದಲ್ಲಿ ಮುಸ್ಮಾನರು ನಮಾಜು ಮಾಡ್ತಾರೆ, ಮಾಂಸದ ಊಟ ಮಾಡ್ತಾರೆ ಎಂದರೆ ಏನರ್ಥ ? ಪೀಠದ 200 ಮೀಟರ್ ವ್ಯಾಪ್ತಿಯಲ್ಲಿ ನಮಾಜು ಮಾಡಬಾರದು, ಮಾಂಸದ ಊಟ ಮಾಡಬಾರದು ಎನ್ನುವ ನಿಯಮ ಇದ್ದರೂ ಪೊಲೀಸ್ ಇಲಾಖೆ ಏನು ಮಾಡುತ್ತಿದೆ. ದತ್ತ ಪೀಠದಿಂದಲೇ ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಗೆದ್ದಿದ್ದಾರೆ. ಈಗ ಅವರೇನು ಮಾಡ್ತಿದ್ದಾರೆ ಎಂದು ಮುತಾಲಿಕ್ ಪ್ರಶ್ನೆ ಮಾಡಿದರು.
ಅಲ್ಲಿ ಧಾರ್ಮಿಕ ದತ್ತಿ ಇಲಾಖೆಯು ಪೀಠದ ಅಧಿಕಾರಿಯನ್ನು ಕಿತ್ತೊಗೆಯಬೇಕು. ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ನಮ್ಮಂತ ಹೋರಾಟಗಾರರಿಗೆ, ಹಿಂದುತ್ವವಾದಿಗಳಿಗೆ ರಾಜಕೀಯ ಬಾಗಿಲು ಮುಚ್ಚಿದೆ. ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ. ಬಿಜೆಪಿಗೆ ಯಾವುದೇ ಹಿಂದೂತ್ವ ಇಲ್ಲ. ಯೋಗಿ ಆದಿತ್ಯನಾಥ ತರ ರಾಜ್ಯದಲ್ಲಿ ಯಾವುದೇ ಕ್ರಮಗಳಾಗುತ್ತಿಲ್ಲ. ಅಲ್ಲೂ ಒಂದೇ ಕಾನೂನು, ಇಲ್ಲಿಯೂ ಒಂದೇ ಕಾನೂನು. ಆದರೂ ಯಾವುದೇ ಕ್ರಮಗಳು ಇಲ್ಲಿ ಜರುಗಿಸುತ್ತಿಲ್ಲ ಎಂದು ಕಿಡಿಕಾರಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5