ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚಾಕೊಲೇಟ್ ಅಚ್ಚುಮೆಚ್ಚು. ಇದೀಗ ಬಾಯಿ ಚಪ್ಪರಿಸಿ ಡೈರಿ ಮಿಲ್ಕ್ ಚಾಕಲೇಟ್ ತಿನ್ನೋರಿಗೆ ಇಲ್ಲೊಂದು ಶಾಕ್ ಕಾದಿದೆ. ಹೌದು, ನೀವು ಮಕ್ಕಳಿಗೆ ಪ್ರೀತಿಯಿಂದ ನೀಡುವ ಚಾಕೋಲೇಟ್ ಗಳೇ ಅವರ ಜೀವಕ್ಕೆ ಅಪಾಯ ತರಬಹುದು.
ಇತ್ತೀಚಿನ ದಿನಗಳಲ್ಲಿ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೋಲೇಟ್ ಗಳಲ್ಲಿ ಹುಳುಗಳು ಪತ್ತೆಯಾಗುತ್ತಿರುವ ಸುದ್ದಿಗಳು ಆಗ್ಗಾಗ್ಗೆ ಕೇಳಿ ಬರುತ್ತಿದೆ. ಇದೀಗ ಮಡಿಕೇರಿಯ ಸುಲ್ತಾನ್ ಎಂಬವರು ಖರೀದಿಸಿದ ಡೈರಿ ಮಿಲ್ಕ್ ಸಿಲ್ಕ್ (ಹ್ಯಾಝಲ್ನೆಟ್) ಚಾಕೋಲೇಟ್ ನಲ್ಲಿ ಹುಳುಗಳು ಕಂಡು ಬಂದಿವೆ.
ಸುಲ್ತಾನ್ ಎಂಬವರು ಮಕ್ಕಳಿಗೆಂದು ಖರೀದಿಸಿದ ಈ ಚಾಕೋಲೇಟ್ ಅನ್ನು ಓಪನ್ ಮಾಡಿದಾಗ ಅದರಲ್ಲಿನ ಹ್ಯಾಝೆಲ್ ನೆಟ್ ಗಳಿಂದ ಹುಳುಗಳು ಹೊರಬರುತ್ತಿರುವುದು ಕಂಡು ಬಂದಿದೆ. ಚಾಕೋಲೇಟ್ನ ಎಕ್ಸ್ ಪೈರಿ ಡೇಟ್ 22–1–2025 ಇದ್ದು, ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಪೋಷಕರು ಈ ಬಗ್ಗೆ ಎಚ್ಚರವಹಿಸುವಂತೆ ಸೂಚಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


