ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಿದೆ. ಜೊತೆಗೆ ವಿದ್ಯುತ್ ಬೇಡಿಕೆ ಕೂಡಾ ಹೆಚ್ಚಿದೆ. ಜನರು ಬಿಸಿಲ ಧಗೆಯನ್ನು ಕಡಿಮೆ ಮಾಡಲು ಎಸಿ, ಫ್ಯಾನ್, ಕೂಲರ್ ಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ಗೃಹಜ್ಯೋತಿ ಗ್ರಾಹಕರು ಕೂಡಾ ಸಾಮಾನ್ಯ ಗ್ರಾಹಕರಂತೆ ಎಲ್ಲಾ ಯೂನಿಟ್‌ಗೂ ನಿಗದಿತ ದರದಂತೆ ಇದೀಗ ಬಿಲ್ ಪಾವತಿಸಬೇಕಿದೆ.
2022-23 ನೇ ಸಾಲಿನ ವಾರ್ಷಿಕ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗಿದೆ. ನಿಗದಿತ ಸರಾಸರಿಗಿಂತ 150 ಉಚಿತ ಯೂನಿಟ್ ಗಿಂತ 50 ಯೂನಿಟ್ ಹೆಚ್ಚು ಬಳಕೆ ಮಾಡಿದ್ದಲ್ಲಿ ಪ್ರತಿ ಯೂನಿಟ್ ಗೆ 7 ರೂ.ಪಾವತಿ ಮಾಡಬೇಕು.
ಇದೀಗ ಬಿಸಿಲ ಝಳ ಹೆಚ್ಚಾಗಿರುವ ಕಾರಣ ವಿದ್ಯುತ್ ಬಳಕೆ ಶೇ.20 ರಷ್ಟು ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆ ಮಾಡುತ್ತಿರುವುದರಿಂದ ಗೃಹಜ್ಯೋತಿ ಬಳಕೆದಾರರು ಕೂಡಾ ಸಾಮಾನ್ಯ ಗ್ರಾಹಕರ ರೀತಿ ನಿಗದಿತ ದರದಂತೆ ಬಿಲ್ ಪಾವತಿ ಮಾಡಬೇಕಿದೆ.
ಶೇ.20ಕ್ಕೂ ಅಧಿಕ ಗೃಹಜ್ಯೋತಿ ಗ್ರಾಹಕರಿಗೆ ಇದು ಶಾಕಿಂಗ್ ನ್ಯೂಸ್ ಎಂದು ಹೇಳಬಹುದು. ಗೃಹಜ್ಯೋತಿ ಸರಾಸರಿ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆಯಾದರೆ ಎಲ್ಲಾ ಯೂನಿಟ್ ಗೂ ಬಿಲ್ ಕಟ್ಟಬೇಕು. ಕಡಿಮೆ ವಿದ್ಯುತ್ ಬಳಸಿದರೆ ಗೃಹಜ್ಯೋತಿ ಸೌಲಭ್ಯ ಸಿಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


