ನವದೆಹಲಿ: ದೆಹಲಿ ಸರ್ಕಾರ ಏಪ್ರಿಲ್ ತಿಂಗಳಲ್ಲಿ 5 ದಿನಗಳ ಡ್ರೈ ಡೇ ಘೋಷಿಸಿದೆ. ಅದರ ದಿನಾಂಕಗಳನ್ನೂ ಅಬಕಾರಿ ಇಲಾಖೆ ಪ್ರಕಟಿಸಿದೆ. ಏಪ್ರಿಲ್ ನಲ್ಲಿ ಈ ಐದು ದಿನಗಳ ಕಾಲ ಸರ್ಕಾರ ನಿರ್ಧರಿಸಿದ ದಿನಾಂಕಗಳಲ್ಲಿ ಮದ್ಯದ ಮಾರಾಟ ಸಂಪೂರ್ಣವಾಗಿ ಬಂದ್. ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ದೆಹಲಿ ಸರ್ಕಾರದ ಅಬಕಾರಿ ಇಲಾಖೆಯು ಡ್ರೈ ಡೇ ಕುರಿತು ಆದೇಶವನ್ನು ಹೊರಡಿಸಿದೆ. ಇದರ ಪ್ರಕಾರ, ಏಪ್ರಿಲ್ 11 ರಂದು ಈದ್, ಏಪ್ರಿಲ್ 17 ರಂದು ರಾಮ ನವಮಿ ಮತ್ತು ಏಪ್ರಿಲ್ 21 ರಂದು ಮಹಾವೀರ ಜಯಂತಿಯಂದು ಮದ್ಯದ ಅಂಗಡಿಗಳು ಅಥವಾ ಮಾರಾಟಗಾರರು ತೆರೆಯುವುದಿಲ್ಲ. ಇನ್ನೊಂದೆಡೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿ ಗಡಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶದ ಜಿಲ್ಲೆಗಳಲ್ಲೂ ಡ್ರೈ ಡೇ ಘೋಷಿಸಲಾಗಿದೆ. ಅಬಕಾರಿ ಇಲಾಖೆ ಹೊರಡಿಸಿರುವ ಮತ್ತೊಂದು ಆದೇಶದ ಪ್ರಕಾರ, ಉತ್ತರ ಪ್ರದೇಶದ ಗಡಿ ಪ್ರದೇಶಗಳಲ್ಲಿ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಏಪ್ರಿಲ್ 24 ರಂದು ಸಂಜೆ 6 ರಿಂದ ಏಪ್ರಿಲ್ 26 ರ ಸಂಜೆ 6 ರವರೆಗೆ ಡ್ರೈ ಡೇಯನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ಮದ್ಯದ ಖರೀದಿ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


