ತುಮಕೂರು: ಮಳೆಗಾಲದಲ್ಲಿ ಸಾಮಾನ್ಯವಾಗಿ ಹಾವುಗಳು ಸಿಕ್ಕಿದ ಸ್ಥಳಗಳಲ್ಲೆಲ್ಲ ನುಗ್ಗಿ ಕುಳಿತುಕೊಳ್ಳಲು ಆರಂಭಿಸುತ್ತವೆ. ಈ ಪೈಕಿ ಹೆಚ್ಚಾಗಿ ನಾವು ಧರಿಸುವ ಶೂಗಳ ಒಳಗೆ ಹಾವುಗಳು ಬೆಚ್ಚಗೆ ಕುಳಿತುಕೊಳ್ಳುವುದೇ ಹೆಚ್ಚು. ಇಂತಹ ಘಟನೆಯೊಂದು ತುಮಕೂರು ನಗರದ ಹೊರವಲಯದ ರಂಗಾಪುರದಲ್ಲಿ ನಡೆದಿದೆ.
ವರದಿಗಳ ಪ್ರಕಾರ ರಂಗನಾಥ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ಮನೆ ಮುಂದೆ ಬಿಚ್ಚಿಟ್ಟಿದ್ದ ಶೂ ಒಳಗಡೆ ಹಾವು ನುಗ್ಗಿದ್ದು, ಬೆಳಿಗ್ಗೆ ಶೂ ಹಾಕಲು ಮುಂದಾದ ವೇಳೆ ಹಾವು ಬುಸುಗುಟ್ಟುವ ಶಬ್ಧ ಕೇಳಿ ಬಂದಿದ್ದು, ಶೂ ಒಳಗೆ ನೋಡಿದಾಗ ಹಾವು ಕಂಡು ಬಂದಿದೆ.
ರಂಗನಾಥ್ ಅವರು ಹಾವಿನಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಶೂವನ್ನು ಸರಿಯಾಗಿ ನೋಡದೇ ಧರಿಸಿದ್ದರೆ, ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಗಳಿತ್ತು. ಇನ್ನೂ ಹಾವನ್ನು ತಕ್ಷಣವೇ ಉರಗ ರಕ್ಷಕ ದಿಲೀಪ್ ಅವರನ್ನು ಕರೆಸಿ, ರಕ್ಷಣೆ ಮಾಡಲಾಗಿದ್ದು, ಅವರು ಹಾವನ್ನು ಹಿಡಿದು ದೇವರಾಯನದುರ್ಗ ಕಾಡಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಶೂ ಒಳಗೆ ಹಾವು ಕುಳಿತಿರುವ ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಮನೆಯ ಹೊರಗಡೆ ಶೂಗಳನ್ನು ಬಿಚ್ಚಿಡುವುದು ಅಷ್ಟೊಂದು ಉತ್ತಮವಲ್ಲ. ಸುರಕ್ಷಿತ ಪ್ರದೇಶಗಳಲ್ಲಿ ಶೂಗಳನ್ನು ಬಿಚ್ಚಿಡುವುದು ಉತ್ತಮ. ಹಾಗೆಯೇ ಶೂಗಳನ್ನು ಧರಿಸುವ ಮೊದಲು ಅದರೊಳಗೆ ಏನಿದೆ ಎನ್ನುವುದನ್ನು ಸರಿಯಾಗಿ ಪರಿಶೀಲನೆ ನಡೆಸಿ ಬಳಿಕ ಬಳಸುವುದು ಉತ್ತಮ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


