ಬೆಂಗಳೂರು: ಮೊಬೈಲ್ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ ಮಚ್ಚಿನಿಂದ ಹಲ್ಲೆ ನಡೆಸಿರೋ ಘಟನೆ ಬಾಪೂಜಿನಗರದ ಮಧುರ ಬಾರ್ ಬಳಿ ನಡೆದಿದೆ. ಮನೋಜ್, ತರುಣ್, ಕಿರಣ್ ಸೇರಿ ಓರ್ವ ಅಪ್ರಾಪ್ತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮನೋಜ್ ಎಂಬಾತ ತಿಂಗಳ ಹಿಂದೆ ವಿಜಯ್ ಮೊಬೈಲ್ ಕಸಿದು ವಾಪಸ್ ಕೊಟ್ಟು ತಮಾಷೆ ಮಾಡಿದ್ದನಂತೆ. ಇದಾದ ಬಳಿಕ ಕಳೆದ ವಾರ ಒಂದೇ ಬಾರ್ ನಲ್ಲಿ ಮದ್ಯಪಾನ ಮಾಡಲು ಮನೋಜ್ ಮತ್ತು ವಿಜಯ್ ಸೇರಿದ್ದರು. ಈ ವೇಳೆ ವಿಜಯ್ ಮೊಬೈಲ್ ಕಸಿದುಕೊಂಡಿದ್ದ ವಿಚಾರ ಪ್ರಸ್ತಾಪಿಸಿ ತಮಾಷೆ ಮಾಡಿದ್ದಾನಂತೆ.
ಇದೇ ವಿಚಾರಕ್ಕೆ ಕೋಪಗೊಂಡ ಮನೋಜ್ ಮೂವರನ್ನ ಕರೆದುಕೊಂಡು ಬಂದು ತನಗೆ ಅವಮಾನ ಮಾಡ್ತೀಯ ಅಂತ ಮಚ್ಚಿನಿಂದ ವಿಜಯ್ ಮೇಲೆ ಮನೋಜ್ ಹಲ್ಲೆ ಮಾಡಿದ್ದಾನಂತೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವಿಜಯ್ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದಾನೆ. ವಿಜಯ್ ದೂರಿನ ಆಧಾರದ ಮೇಲೆ ಓರ್ವ ಅಪ್ರಾಪ್ತ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296