ಪಾವಗಡ: ತಾಲ್ಲೂಕು ನಿಡಗಲ್ಲು ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹರಿಹರಪುರ ಗ್ರಾಮದ ಯುವಕರು, ಸಾರ್ವಜನಿಕರು ಸೇರಿ ಚಿತ್ರದುರ್ಗ ಜಿಲ್ಲೆಯ ಶ್ರೀಆದಿಜಾಂಬವ ಕೋಡಿಹಳ್ಳಿ ಮಹಾ ಸಂಸ್ಥಾನದ ಶ್ರೀ ಶ್ರೀ ಶ್ರೀ ಮಾರ್ಕಂಡೇಯ ಮುನಿ ಸ್ವಾಮೀಜಿ ಅವರ ನಿಧನಕ್ಕೆ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಸ್ವಾಮೀಜಿಗಳ ನಿಧನ ವಾರ್ತೆ ಆಘಾತವನ್ನುಂಟು ಮಾಡಿದೆ ಹಾಗೂ ನಮ್ಮ ಸಮಾಜಕ್ಕು ಭಾರಿ ನಷ್ಟವಾಗಿದೆ. ಶ್ರೀ ಶ್ರೀ ಶ್ರೀ ಸ್ವಾಮೀಜಿರವರ ಪಾದಪದ್ಮಾಂಬಗಳಿಗೆ ಕೋಟಿ ಕೋಟಿ ನಮನಗಳನ್ನು ಅರ್ಪಿಸುತ್ತ ಶ್ರೀಗಳ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಇದೇ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಮ್ಮ/ಈರಣ್ಣ, ಗ್ರಾ.ಪಂ. ಸದಸ್ಯ ಆರುದಂತಿ, ನಾಗಲಿಂಗಪ್ಪ, ದೊಡ್ಡಣ್ಣ, ಗ್ರಾ.ಪಂ.ಕೊಡಿನೇಟರ್ ಹನುಮಂತರಾಯ, ಸಿ.ಕೆ.ಪುರ. ಹರಿಹರಪುರ ಗ್ರಾಮದ ಈರಣ್ಣ, ನಾಗರಾಜ, ಹನುಮಂತರಾಯ, ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ವಾಟ್ಸಾಪ್ ಗ್ರೂಪ್ ಸೇರಿ: