ಗುಬ್ಬಿ: ಗುಬ್ಬಿ ಶಾಸಕ ಎಸ್.ಆರ್.ಶ್ರೀ ನಿವಾಸ್ ಬಿಜೆಪಿ ಪಕ್ಷಕ್ಕೆ ಬಂದರೆ ನಾನು ಸ್ವಾಗತಿಸಲು ಸಿದ್ದರಿದ್ದೇವೆ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲೆ ಜಯರಾಮ್ ವಿಶ್ವಾಸ ವ್ಯಕ್ತಪಡಿಸಿದರು.
ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಮಳೆಕಲ್ಲಹಳ್ಳಿ, ಪೆದ್ದನಹಳ್ಳಿ, ಕೆ ಮತ್ತಿಘಟ್ಟ . ಕಲ್ಲೂರು ಕ್ರಾಸ್ ಮತ್ತು ಸಿ.ಎಸ್.ಪುರ ಹೋಬಳಿಯ ಯರನಹಟ್ಟಿ, ಮತ್ತು ಜನ್ನೇನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಕೆ ಆರ್ ಐ ಡಿ ಎಲ್ ವತಿಯಿಂದ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಇಂದು ಹಿಂದುಳಿದ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ 2.75 ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿ ನೇರವೆರಿಸಿದ್ದು, ಸಾಕಷ್ಟು ಗ್ರಾಮಗಳಲ್ಲಿ ಈಗಾಗಲೇ ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯದ ಹಂತ ತಲುಪಿವೆ. 240 ಹಳ್ಳಿಗಳ ಅಭಿವೃದ್ಧಿ ಗೆ 36 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಪುನಃ ಮತ್ತಷ್ಟು ಗ್ರಾಮಗಳ ಅಭಿವೃದ್ಧಿ 15 ಕೋಟಿ ಅನುದಾನ ಬಿಡುಗಡೆಯಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವ ಗ್ರಾಮದಲ್ಲಿ ಕಾಮಗಾರಿ ಬಾಕಿಉಳಿದಿದ್ದೇಯೋ ಅಂತ ಗ್ರಾಮಗಳ ಅಭಿವೃದ್ಧಿ ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ತುರುವೇಕೆರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ.80 ರಷ್ಟು ರಸ್ತೆ ಮತ್ತು ವಿವಿಧ ಕಾಮಗಾರಿಗಳು ಮುಕ್ತಾಯವಾಗಿದ ಉಳಿದ ಕಾಮಗಾರಿಯನ್ನು ಮಾಡುವ ಮೂಲಕ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲು ನಾನು ಬದ್ದನಾಗಿದ್ದೇನೆ ಎಂದು ಇಂಗಿತ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ ಮೇಲೆ ವಿಧಿಸಿರು ಜಿ ಎಸ್ ಟಿ ತೆರಿಗೆಯನ್ನು ವಿಧಿಸಿರುವುದು ಜನ ಸಾಮಾನ್ಯರಿಗೆ ಬಹಳ ತೊಂದರೆ ಯಾಗುತ್ತಿದೆ. ಕೇಂದ್ರ ಸರ್ಕಾರ ಅತಿ ಶೀಘ್ರದಲ್ಲೇ ಆಹಾರ ಪದಾರ್ಥಗಳ ತೆರಿಗೆಯನ್ನು ಹಿಂಪಡೆಯುವ ವಿಶ್ವಾಸವಿದೆ ಎಂದರು.
ಬಿಜೆಪಿ ವರಿಷ್ಠರು ಮುಂಭಾರುವ 2023 ರಚುನಾವಣೆ ಯಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚು ಬಹುಮತ ಪಡೆಯುವ ನಿಟ್ಟಿನಲ್ಲಿ ಹಾಲಿ ಬಿಜೆಪಿ ಶಾಸಕರು ಇರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರದ ಶಾಸಕರನ್ನು ಪಕ್ಷ ಕ್ಕೆ ತರುವ ನಿಟ್ಟಿನಲ್ಲಿ ಮತ್ತು ಪಕ್ಕದ ತಾಲ್ಲೂಕಿನ ಲ್ಲಿ ಬಿಜೆಪಿ ಪಕ್ಷ ವನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಯನ್ನು ನೀಡಿದ್ದು ಅದರಂತೆ ಪಕ್ಷದ ವರಿಷ್ಠರು ನೀಡುವ ಜವಾಬ್ದಾರಿ ನಾನು ನಿಭಾಯಿಸಲು ಸಿದ್ದರಿದ್ದೇವೆ ಎಂದರು.
ಪಠ್ಯ ಪುಸ್ತಕ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ದವರು.ವಿನಾಕಾರಣ ಜನತೆಯ ಲ್ಲಿ ತಪ್ಪು ಸಂದೇಶ ರಾವನೆಯಾಗುವಂತೆ ಮಾಡುತ್ತಿದ್ದಾರೆ.ಇದರಿಂದ ಇವರ ಪಕ್ಷದ ವಾರ್ಚಸ್ಸು ಇವರೆ ಕಳೆದುಕೊಳ್ಳುವಲ್ಲಿ ಮುಂದಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷ ದ ಸ್ಥಾನವನ್ನು ಕಳೆದು ಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಯವರ ಹಲವು ಅಭಿವೃದ್ಧಿ ಆಡಳಿತ ರಾಜ್ಯದ ರೈತರಿಗೆ ಹಾಗೂ ಜನತೆಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ತುರುವೇಕೆರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿಥಲವಾಗಿದ್ದ ಶಾಲೆಗಳ ಅಭಿವೃದ್ಧಿ ಮತ್ತು 80 ನೂತನ ಶಾಲಾ ಕಟ್ಟಡ ನಿರ್ಮಾಣವಾಗಿದ್ದು. ಉಳಿದಂತೆ 40 ಶಾಲಾ ಕಟ್ಟಡ ಮಂಜೂರಾತಿ ದೊರೆತಿದೆ. ಶಿಥಲವಾಗಿರುವ ಕಟ್ಟಡಗಳ ನವೀಕರಣಕ್ಕೆ ಅನುದಾನವನ್ನು ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಭಾನು ಪ್ರಕಾಶ್, ಸಿ.ಎಸ್.ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಂಡುರಂಗಯ್ಯ, ಪೆದ್ದನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜು, ಸದಸ್ಯರಾದ ಕುಮಾರ್, ನಾಗರಾಜು, ಚಂದ್ರಮ್ಮ ರಾಜು, ಗಂಗಾಧರಯ್ಯ, ಬಸವರಾಜು ಕರೇಗೌಡ, ಮಾವಿನಹಳ್ಳಿ ಕಿರಣ್, ಗೌತಮ್, ಗುತ್ತಿಗೆದಾರರಾದ ಚನ್ನಿಗಪ್ಪ, ದೇವರಾಜು,ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಗೂ ಇನ್ನಿತರರು ಹಾಜರಿದ್ದರು.
ವರದಿ: ಮಂಜುನಾಥ್ , ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz