nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

    February 8, 2026

    ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 8, 2026

    ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ

    February 8, 2026
    Facebook Twitter Instagram
    ಟ್ರೆಂಡಿಂಗ್
    • ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ
    • ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
    • ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ
    • ಪಾವಗಡ: ಜಾತಿ ನಿಂದನೆ, ಆಯುಧ ತೋರಿಸಿ ಕೊಲೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು
    • ತುಮಕೂರು ಕಾಂಗ್ರೆಸ್‌ ನಲ್ಲಿ ಭುಗಿಲೆದ್ದ ಆಕ್ರೋಶ: ‘ನಾಯಕರಿಂದಲೇ ಚುನಾವಣೆ ಗೆಲ್ಲಿಸಿಕೊಳ್ಳಿ’ ಎಂದು ಕಾರ್ಯಕರ್ತರ ಸವಾಲು
    • ಜೀತಕಾರ್ಮಿಕ ಪದ್ಧತಿ ನಿರ್ಮುಲನಾ ದಿನಾಚರಣೆ ದಿನಾಂಕ ಬದಲಿಸಲು ಒತ್ತಾಯ
    • ಸೈಬರ್ ಮೋಸದ ಜಾಲವನ್ನು ಭೇದಿಸಿದ ತುಮಕೂರು ಪೊಲೀಸರು: ಇಬ್ಬರು ಆರೋಪಿಗಳ ಬಂಧನ
    • ಮುಂದಿನ ಚುನಾವಣೆಯಲ್ಲೂ ಜೆಡಿಎಸ್–ಬಿಜೆಪಿ ಮೈತ್ರಿ ಮುಂದುವರಿಯುತ್ತಾ?: ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶ್ರೀಮದ್ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಮಠಾಧೀಶ ಶ್ರೀ ಮಾರ್ಕಂಡೇಯ ದೇಶಿಕೇಂದ್ರ ಸ್ವಾಮೀಜಿ ನಿಧನ
    ರಾಜ್ಯ ಸುದ್ದಿ November 5, 2021

    ಶ್ರೀಮದ್ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಮಠಾಧೀಶ ಶ್ರೀ ಮಾರ್ಕಂಡೇಯ ದೇಶಿಕೇಂದ್ರ ಸ್ವಾಮೀಜಿ ನಿಧನ

    By adminNovember 5, 2021No Comments2 Mins Read
    shree markandeya swamiji

    ಚಿತ್ರದುರ್ಗ:  ಜಿಲ್ಲೆ  ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿಯ ಶ್ರೀಮದ್ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಮಾರ್ಕಂಡೇಯ ದೇಶಿಕೇಂದ್ರ ಸ್ವಾಮೀಜಿಯವರು  ಗುರುವಾರ ಜಂಬೂಶಾಂತಿ ಹೊಂದಿರುತ್ತಾರೆ.

    ಆದಿಜಾಂಬವ ಮಾತಂಗ ಪರಂಪರೆಯಲ್ಲಿ  ಪ್ರಾಚೀನ ಕಾಲದಿಂದಲೂ ಮಠ ಪರಂಪರೆಯಿದ್ದು, ಶ್ರೀ ಮಠದ ಸಂರಕ್ಷಿತ ದಾಖಲೆಗಳ ಪ್ರಕಾರ ಆಂಧ್ರಪ್ರದೇಶ ಕಡಪ ಮೂಲದ ಶ್ರೀ ಚಂದಾಯಮುನಿ ಅವರಿಂದ ಶ್ರೀಮನೃಪ ಶಾಲಿವಾಹನ ಶಕೆ 1061 ರಲ್ಲಿ ಅಂದರೆ ಕ್ರಿ.ಶ 1139 ನೇ ಇಸವಿಯಲ್ಲಿ ಸ್ಥಾಪಿತವಾದ ಮಠ ಇದು. ಇಂತಹ ಪುರಾತನ ಗುರು ಪರಂಪರೆಯ ಮಠಕ್ಕೆ ಮುಸ್ಲಿಂ ನವಾಬರು, ಟಿಪ್ಪೂ ಸುಲ್ತಾನ್ ಹಾಗೂ ಮೈಸೂರು ಅರಸರು ಅಧಿಕಾರ ಮುದ್ರೆಯುಂಗುರ, ಬಿಲ್ಲೆ ಜವಾನರ ಸರ್ಕೀಟು ಸೇವೆ, ಬಿಕ್ಕಲಂ ಲೆಕ್ಕಣಿಗರು, ಭೂ ಇನಾಮು, ಕುದುರೆ, ತುರಾಯಿ ಟೊಪ್ಪಿಗೆ,  ಡವಾಲಿ, ಬಿಳಿಜರಿಯ ಕೆಂಪು ಅಡ್ಡಶಲ್ಯ, ನಿಶಾನಿ ಲಾಂಛನಗಳನ್ನು ಒದಗಿಸಿರುವ ದಾಖಲೆಗಳಿವೆ.


    Provided by
    Provided by

     

    ಈಗಿನ ಸೀಮಾಂಧ್ರದಲ್ಲಿರುವ ಕಡಪ ಪಟ್ಟಣವು ಟಿಪ್ಪು ಸುಲ್ತಾನನ ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಸೇರಿತ್ತು.  ಕ್ರಿಶ.1784 ರಲ್ಲಿ ಮಾದಿಗರ ಸಾಂಸ್ಕೃತಿಕ ರಾಜಧಾನಿ ಎನ್ನಿಸಿದ್ದ ಕಡಪ ಪಟ್ಟಣದ ಆದಿಜಾಂಬವ ಮಾತಂಗ ಮಹಾ ಸಂಸ್ಥಾನದ ಅಭಿವೃದ್ಧಿಗಾಗಿ ದತ್ತಿಮಾನ್ಯಗಳನ್ನು ಒದಗಿಸಿದ್ದ ಟಿಪ್ಪು ಸುಲ್ತಾನ್, ದಲಿತರ ಧಾರ್ಮಿಕ ಘನತೆಯನ್ನು ಎತ್ತರಿಸಿದ್ದನು. ಆಗಿನ ಕಡಪ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಜಾಂಬವಗುರು ಚಂದಾಯಮುನಿಯವರಿಗೆ ತನ್ನ ರಾಜಮರ್ಯಾದೆಗಳ ಭಾಗವಾಗಿ ಪಲ್ಲಕಿ ಮೆರವಣಿಗೆ, ಕೆಂಪು ಛತ್ರಿ, ಕೆಂಪು ನಿಶಾನಿ (ಗಿಣಿವಸ್ತ್ರ, ಗರುಡ ನಿಶಾನಿ), ಅಫ್ತಾಗಿರಿ ರಕ್ಷಣೆ, ಚಾಮರ ಸೇವೆ, ತುರಾಯಿ ಪಾಗು ಮುಂತಾದ ಸೌಲಭ್ಯಗಳನ್ನು ಒದಗಿಸಿದ್ದನು.  ಕಡಪ ಆದಿಜಾಂಬವ ಮಾತಂಗ ರಾಜಸಿಂಹಾನ ಮಠದ ಅಧೀನದಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿಯ ಶ್ರೀಮದ್ ಆದಿಜಾಂಬವ ಮಾತಂಗ ಮಹಾಸಂಸ್ಥಾನವು ಇತ್ತು.

    ಆಂಧ್ರಪ್ರದೇಶದ ಕಡಪ ಮಠದ ಶಾಖಾ ಮಠವಾಗಿದ್ದ ಕೋಡಿಹಳ್ಳಿಯ ಆದಿಜಾಂಬವ ಮಠಕ್ಕೆ ಕ್ರಿ.ಶ.1893 ರಲ್ಲಿ ಮೈಸೂರು ದಿವಾನರು ಕಂಚಿನ ಬಿಲ್ಲೆ ಜವಾನರ ಸೇವೆ ಒದಗಿಸಿದ್ದು ಆಗಿನ ಕಾಲದ ಆದಿಜಾಂಬವ ಗುರುಗಳಿಗೆ ಬೇರಾವುದೇ ಜಾತಿಯ ಮಠಾಧೀಶರಿಗೆ ನೀಡದ ಬಿರುದು ಮರ್ಯಾದೆ ಹಕ್ಕು ಸೌಲಭ್ಯಗಳನ್ನು ಒದಗಿಸಿ ಅನುಭವಿಸಿರುವುದು ತಿಳಿದುಬರುತ್ತದೆ.

    ತಮ್ಮ ಹೆಸರುಗಳ ಕೊನೆಯಲ್ಲಿ ಮುನಿ ಎಂಬ ಪ್ರತ್ಯಯವನ್ನು ಸೇರಿಸಿಕೊಳ್ಳುವ ರೂಢಿ ಇವರಲ್ಲಿದೆ. ಜಾಂಬವ ಮುನಿ, ಮಾತಂಗ ಮುನಿ, ಬಕಾಲ ಮುನಿ, ಯುಗಮುನಿ, ಹೆಪ್ಪುಮುನಿ,  ರುದ್ರಾಕ್ಷಿ ಮುನಿ, ಓಂಕಾರಮುನಿ, ನೀಲಮುನಿ, ಮಾರ್ಕಾಂಡಮುನಿ, ಷಡಕ್ಷರ ಮುನಿ ಹೀಗೆ ಋಷಿ ಎಂಬುದರ ಬದಲಾಗಿ ಮುನಿ ಎಂದೇ ಕರೆಯಲಾಗುತ್ತದೆ.

    ಲಿಂಗ ಭಸಿತ ರುದ್ರಾಕ್ಷಿ ಗುರುಮಣಿ ಧರಿಸುವ ಶೈವಾರಾಧಕರಾದ ಇವರು ಲಿಂಗಾಯತ ವಿರಕ್ತ ಪರಂಪರೆಯ ಸಂಪ್ರದಾಯಕ್ಕೆ ಹೊರತಾದ ಸಾಂಸಾರಿಕ ಜೀವನ ಪದ್ದತಿಯನ್ನು ಅನುಸರಿಸುತ್ತಾರೆ. ಲಿಂಗಾಯತ ಆಚರಣೆಗಳ ಪ್ರಕಾರವೇ ಲಿಂಗದೀಕ್ಷೆ ಪಡೆದು ಗುರುಸ್ಥಾನ ಅಲಂಕರಿಸುವ ಆದಿಜಾಂಬವರು ಲಿಂಗಾಯತವು ಮೂಲದಲ್ಲಿ ಮಾದಿಗರದ್ದು ಎಂದು ಕ್ಲೇಮು ಮಾಡುತ್ತಾರೆ.

    ಮಠದ ಹೆಣ್ಣುಮಕ್ಕಳನ್ನು ಗುರುಮಗಳು- ಗುರುಪತ್ನಿ- ಗುರುತಾಯಿ – ಜಾಂಬವತಿ ಎಂಬ ಪದವಿಶೇಷಣಗಳಿಂದ ಕರೆಯಲಾಗುತ್ತದೆ. ಗಂಡುಮಕ್ಕಳನ್ನು ಜಾಂಬವ ಗುರುವಿನಯ್ಯನೋರು, ಗುರುತಂದೆ, ಗುರುಮಗ ಎಂದು ಸಂಬೋಧಿಸಲಾಗುತ್ತದೆ.

    ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ನುಲಿಯ ಚಂದಯ್ಯ, ನುಲಿಯ ಸಂಗಯ್ಯ, ಸಮಗಾರ ಹರಳಯ್ಯನ ಪುಣ್ಯಸ್ತ್ರೀ ಕಲ್ಯಾಣಮ್ಮ ಮುಂತಾದ ಶರಣರು ಆದಿಜಾಂಬವ ಪರಂಪರೆಯ ಕವಿಪ್ರತಿಭೆ ವಚನಕಾರರಾಗಿ ಗುರುತಿಸಿಕೊಂಡಿದ್ದಾರೆ.

    ಇಂತಹ ಆದಿಮ ಪರಂಪರೆಯಲ್ಲಿ ಶ್ರೀಶೈಲ ಮಠ, ಪೆನಗೊಂಡೆ ಮಠ, ಕಡಪ ಮಠ, ಬೆಜವಾಡ ಮಠ, ಕೊಂಕಲ್ ಮಠ, ನೆಲಮಂಗಲ ಮಠ, ರಾವಂದೂರು ಮಾದಾರ ಚೆನ್ನಯ್ಯ ಗುರುಪೀಠ, ಹಿರೇಸಿಂಧೋಗಿ ಮಾದಾರ ಮರುಳಸಿದ್ಧ ಪೀಠ ಮುಂತಾದ ಅನೇಕ ಮಠಪೀಠಗಳಿಗೆ ಮಕುಟಮಣಿಯಂತಿದ್ದ ಶ್ರೀ ಮಾರ್ಕಂಡೇಯ ಮುನಿ ದೇಶಿಕೇಂದ್ರ ಸ್ವಾಮೀಜಿಯವರು ಜಂಬೂಶಾಂತಿ ಹೊಂದಿದ್ದಾರೆ.

    ಸಾಂಸ್ಕೃತಿಕ ಪರಿಶೋಧನೆ ಹಾಗೂ ಆಧ್ಯಾತ್ಮಿಕ ಪ್ರಯಾಣದ ಭಾಗವಾಗಿ ಶ್ರೀಗಳೊಂದಿಗೆ ಹಾಗೂ ಮಠದೊಂದಿಗೆ ಅನೇಕ ವರ್ಷಗಳಿಂದ ಉತ್ತಮವಾದ  ಬಾಂಧವ್ಯ ಹೊಂದಿದ್ದ ನನಗೆ ಅವರ ಅಗಲಿಕೆ ನನಗೆ ತುಂಬಾ ನೋವು ತಂದಿದೆ.

    ಡಾ.ವಡ್ಡಗೆರೆ ನಾಗರಾಜಯ್ಯ

    8722724174

    admin
    • Website

    Related Posts

    ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

    February 8, 2026

    ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ

    February 8, 2026

    ಮುಂದಿನ ಚುನಾವಣೆಯಲ್ಲೂ ಜೆಡಿಎಸ್–ಬಿಜೆಪಿ ಮೈತ್ರಿ ಮುಂದುವರಿಯುತ್ತಾ?: ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?

    February 7, 2026

    Leave A Reply Cancel Reply

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

    February 8, 2026

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಮುಖ್ಯಮಂತ್ರಿ ಬದಲಾವಣೆ ಹಾಗೂ ಅಧಿಕಾರ ಹಂಚಿಕೆ ವಿಚಾರವಾಗಿ ಗೃಹ ಸಚಿವ ಡಾ. ಜಿ.…

    ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 8, 2026

    ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ

    February 8, 2026

    ಪಾವಗಡ: ಜಾತಿ ನಿಂದನೆ, ಆಯುಧ ತೋರಿಸಿ ಕೊಲೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು

    February 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.