ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಭಕ್ತಿ, ನಾಯಕತ್ವ, ಆದರ್ಶ ಸೇವೆ, ಸಮಾಜ ಸೇವೆ, ಹೃದಯ ಶ್ರೀಮಂತಿಕೆ ಶ್ರೀ ಕ್ಷೇತ್ರದ ಬೆಳವಣಿಗೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲು ಕಾರಣವಾಯಿತು. ಇದು ಕರ್ನಾಟಕ ರಾಜ್ಯಕ್ಕೆ ಸಂದ ಗೌರವವಾಗಿದೆ ಎಂದು ಕಂಚಿ ಕಾಮ ಕೋಟಿ ಪೀಠದ ಪೂಜಾ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಂಚಿ ಕಾಮಕೋಟಿ ಪೂಜ್ಯಶ್ರೀಗಳವರು ಪುರ ಪ್ರವೇಶದಲ್ಲಿ ಭವ್ಯ ಸ್ವಾಗತದ ನಂತರ ಶ್ರೀ ಕ್ಷೇತ್ರಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು.
ಶ್ರೀ ಕ್ಷೇತ್ರದ ಅನ್ನಪೂರ್ಣ ಭೋಜನಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳು ಸಮಾಜದಲ್ಲಿ ದಾರಿದ್ರ್ಯ ನಿರ್ಮೂಲನೆಯಾಗಬೇಕು ಈ ನಿಟ್ಟಿನಲ್ಲಿ ಹೆಗಡೆಯವರ ಕೊಡುಗೆ ಅಪಾರ ಹೆಗಡೆ ಕುಟುಂಬ ಅವಿಭಕ್ತ ಜೀವನಶೈಲಿ ಹೊಂದಿದ್ದು, ಕರ್ನಾಟಕ ಸಂಗೀತ, ಯಕ್ಷಗಾನ, ವಿದ್ಯೆ, ವಿದ್ವಾಂಸರ, ರಕ್ಷಣೆ ಆಗಬೇಕೆಂದರು.
ಶ್ರೀಹೆಗಡೆಯವರು ಪೂಜ್ಯ ಭಾವನೆ, ಬಹುಮುಖ ವ್ಯಕ್ತಿತ್ವ ದವರು, ಆದರ್ಶ ವ್ಯಕ್ತಿತ್ವ, ಕಾಳಜಿ, ಹೊಂದಿದವರು ಬೌಧಿಕ ಹಾಗೂ ಆಧ್ಯಾತ್ಮಿಕ ವಿಕಾಸ ಕಲ್ಪಿಸಿದವರು ಅವರಿಗೆ ಗೌರವ ಹೆಚ್ಚಿದೆ ಎಂದರು. ಕಾರ್ಯಕ್ರಮದಲ್ಲಿ ಡಾ.ಹೇಮಾವತಿ, ವಿ.ಹೆಗಡೆ, ಡಿ.ಹರ್ಷೇಂದ್ರ ಹೆಗಡೆ, ಸುಪ್ರಿಯಾ ಹರ್ಷೇಂದ್ರ ಹೆಗಡೆ, ಸೋನಿಯಾ ಯಶೋವರ್ಮ ಮತ್ತು ಪೂರ್ಣವರ್ಮ ಉಪಸ್ಥಿತರಿದ್ದರು.
ವರದಿ: ಜೆ.ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296