ಪರಮಪೂಜ್ಯರಾದ ಮಹಾ ತಪಸ್ವಿ ಚಿಮ್ಮಲಗಿ ಅರಳಲೇ ಕಟ್ಟಿಮನಿ. ಹಿರೇಮಠದ ಷಟಸ್ಥಲ ಬ್ರಹ್ಮ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಯವರು ಚಿಮ್ಮಲಗಿಯ ಶ್ರೀಮಠದಲ್ಲಿ ರಾತ್ರಿ 10: 02 ನಿಮಿಷಕ್ಕೆ ಲಿಂಗೈಕ್ಯರಾಗಿರುತ್ತಾರೆ.
ಶುಕ್ರವಾರ 13/01/2023ರ ಸಂಜೆ ನಾಲ್ಕು ಗಂಟೆಗೆ ಲಿಂಗೈಕ್ಯ ಪೂಜ್ಯರ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಶ್ರೀ ಮಠದ ಭಕ್ತಾಧಿಗಳು ತಿಳಿಸಿದ್ದಾರೆ.
15 ದಿನಗಳಿಂದ ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಶ್ರೀಗಳ ಅಂತ್ಯಕ್ರಿಯೆ ಜನವರಿ 13ರಂದು ಸಂಜೆ 4ಕ್ಕೆ ಚಿಮ್ಮಲಗಿ ಭಾಗ-2ರಲ್ಲಿ ನಡೆಯಲಿದೆ. ಶ್ರೀಗಳು ಕಳೆದ ವರ್ಷವಷ್ಟೇ ಮಠಕ್ಕೆ ಸಿದ್ಧ ರೇಣುಕ ದೇವರನ್ನು ತಮ್ಮ ಮುಂದಿನ ಪೀಠಾಧಿಕಾರಿಯನ್ನಾಗಿ ನೇಮಿಸಿ ಪಟ್ಟಾಭಿಷೇಕ ಮಾಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


