ನೂತನ ಸಚಿವರಾದ ಬಳಿಕ ಮೊದಲ ಬಾರಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟ ಡಾ.ಜಿ.ಪರಮೇಶ್ವರ್, ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು.
ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಡಾ. ಜಿ ಪರಮೇಶ್ವರ್. ಬಳಿಕ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಶ್ರೀಗಳ ಆಶೀರ್ವಾದ ಪಡೆದರು.
ಸಿದ್ದಗಂಗಾ ಮಠಕ್ಕೆ ಭೇಟಿ ಬಳಿಕ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ಯಾವುದೇ ತತ್ಸಕಾರ್ಯಕ್ಕೆ ನಮ್ಮಲ್ಲಿ ಒಂದು ಪದ್ದತಿ ಇದೆ. ಶ್ರೀ ಮಠಕ್ಕೆ ಭೇಟಿ ಕೊಟ್ಟು,ಪರಮಪೂಜ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಳ್ಳೋದು ಒಂದು ಸಂಪ್ರದಾಯವಾಗಿದೆ ಎಂದರು.
ನಮ್ಮ ಜಿಲ್ಲೆಗೆ ಅನೇಕ ರಾಜ್ಯದ ಜನರು ಬಂದು ಸಂಪ್ರದಾಯವನ್ನ ನಡೆಸಿಕೊಡ್ತಾರೆ. ನಮ್ಮ ತಂದೆಯವರ ಕಾಲದಿಂದ ನಮ್ಮ ಕುಟುಂಬದವರೆಲ್ಲರುವ ಶ್ರೀಮಠಕ್ಕೆ ಹಾಗೆಯೇ ನಡೆದುಕೊಳ್ತೆವೆ ಎಂದರು.
ಸಿದ್ದಲಿಂಗ ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ಚುನಾವಣೆಯ ಮೊದಲು ಇಲ್ಲಿಗೆ ಬಂದು ಆಶೀರ್ವಾದ ಪಡೆದುಕೊಂಡಿದ್ದೆ. ಈಗ ಗೆದ್ದಾದ ಮೇಲೆ ಬಂದು ಅದರಲ್ಲೂ ವಿಶೇಷವಾಗಿ ಸಚಿವರಾಗಿ ಬಂದು ಆಶೀರ್ವಾದ ಪಡೆದಿದ್ದೇನೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy