ಆರ್ಥಿಕವಗಿ ಹಿಂದುಳಿದ ಬಡವರಿಗೆ ಶೇ.10 ರಷ್ಟು ಮೀಸಲಾತಿಗೆ ಸಿದ್ಧರಾಮಯ್ಯ ವಿರೋಧಿಸಿದ್ದಾರೆ. ಅವರು ತಮ್ಮನ್ನ ಹಿಂದುಳಿದ ವರ್ಗದ ಚಾಂಪಿಯನ್ ಎಂದುಕೊಂಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದರು.
ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಮೀಸಲಾತಿ ಬಗ್ಗೆ ಬಿಜೆಪಿ ಸಾಮಾಜಿಕ ನ್ಯಾಯದ ಕಳಕಳಿ ತೋರಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸ್ವಾಗತ ಮಾಡಿದ್ದಾರೆ. ಆದರೆ ಸಿದ್ಧರಾಮಯ್ಯ ಮಾತ್ರ ಇದನ್ನು ಟೀಕೆ ಮಾಡುತ್ತಾರೆ. ಬಡವರ ಮೇಲೆ ನಿಮಗೆ ಎಷ್ಟು ಕಾಳಜಿ ಎಂದು ಸ್ಪಷ್ಟಪಡಿಸಿ. ಕೇವಲ ಬಡವರ ಬಗ್ಗೆ ಭಾಷಣ ಮಾಡಿದರೇ ಪ್ರಯೋಜವಿಲ್ಲ. ಮಾಜಿ ಸಿಎಂ ಸಿದ್ಧರಾಮಯ್ಯಗೆ ಮಲ್ಲಿಕಾರ್ಜುನ ಖರ್ಗೆ ಪಾಠ ಮಾಡಬೇಕು. ಸಿದ್ದರಾಮುಯ್ಯ ಸರ್ವಜ್ಞ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಡಿಕೆ ಶಿವಕುಮಾರ್ ಅವರ ಆದೇಶವನ್ನ ಸಿದ್ಧರಾಮಯ್ಯ ಪಾಲಿಸುತ್ತಿಲ್ಲ ಚುನಾವಣೆಗೆ ಕ್ಷೇತ್ರವಿಲ್ಲದೇ ಒದ್ದಾಡುತ್ತಿದ್ದಾರೆ. ಸಿದ್ಧರಾಮಯ್ಯಗೆ ರಾಜಕೀಯ ಬದ್ಧತೆ ಇಲ್ಲ ಎಂದು ನುಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy