ಜನ ನಾಯಕ, ಸರಳ-ಸಜ್ಜನಿಕೆಯ ಸಾಮಾನ್ಯ ನಾಯಕ ಎಂದೇ ಖ್ಯಾತಿ ಪಡೆದಿರುವ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಮಾರ್ಚ್ 3ಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ ಅವರ ಕುಟುಂಬದ ಆಸ್ತಿ ವಿವರವನ್ನೂ ಸಲ್ಲಿಸಿದ್ದಾರೆ.
ತಾನು ಬಡ ನಾಯಕನಾಗಿದ್ದೇ ಜನ ಸೇವೆ ಮಾಡಿಕೊಂಡಿರುತ್ತೇನೆ ಎಂದು ಹೇಳುವ ಕೋಟ ಶ್ರೀನಿವಾಸ ಪೂಜಾರಿ ಅವರು ಎಷ್ಟು ಆಸ್ತಿ ಹೊಂದಿದ್ದಾರೆ, ಅವರು ಅಷ್ಟೊಂದು ಸಿಂಪಲ್ ಆಗಿರೋದ್ರಿಂದ ಎಷ್ಟು ಹಣ ಅವರ ಬಳಿ ಇರಬಹುದು ಎಂದು ಹಲವರಿಗೆ ಕುತೂಹಲ. ಇದೀಗ ನಾಮಪತ್ರ ಸಲ್ಲಿಸುವ ವೇಳೆ ಕೋಟಾ ಅವರೇ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದು, ಅವರು ಸಲ್ಲಿಸಿದ ಆಸ್ತಿ ವಿವರ ಪ್ರಕಾರ ಕೋಟ ಕುಟುಂಬ ಕೋಟ್ಯಧಿಪತಿ ಅನ್ನೋದು ಗೊತ್ತಾಗಿದೆ.
ಕೋಟ ಶ್ರೀನಿವಾಸ ಪೂಜಾರಿ, ಅವರ ಪತ್ನಿ ಸಹನಾ ಮಕ್ಕಳಾದ ಸ್ವಾತಿ, ಶಶಿಧರ್ ಹಾಗೂ ಶ್ರುತಿ ಅವರ ಹೆಸರಿನಲ್ಲಿ ಇರುವ ಆಸ್ತಿಗಳ ವಿವರವನ್ನು ಸಲ್ಲಿಸಿದ್ದಾರೆ. ಅವರು ಸಲ್ಲಿಸಿರುವ ಪ್ರಕಾರ ಕೋಟ ಶ್ರೀನಿವಾಸ ಪೂಜಾರಿ ಕುಟುಂಬ 3.5 ಕೋಟಿ ಒಡೆಯ ಎಂದು ತಿಳಿದು ಬಂದಿದೆ. ಸಿಂಪಲ್ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಬಳಿ ಕೋಟಿ ಆಸ್ತಿ ಇರುವುದು ಇದೀಗ ಎಲ್ಲರಿಗೂ ತಿಳಿದಿದ್ದು, ಹಲವರ ಕುತೂಹಲ ತಣಿದಿದೆ.
ಅಂದಹಾಗೆ ಅಫಿಡವಿಟ್ ನಲ್ಲಿರುವ ಮಾಹಿತಿ ಪ್ರಕಾರ ಕೋಟ ಶ್ರೀನಿವಾಸ ಪೂಜಾರಿ ಅವರ ಕುಟುಂಬ ಸ್ಥಿರಾಸ್ತಿ ಹಾಗೂ ಚರಾಸ್ತಿಯ ಒಟ್ಟು ಮೌಲ್ಯ 3,58,91,020 ರೂಪಾಯಿ ಆಗಿದೆ. ಕೋಟ ಶ್ರೀನಿವಾಸ ಪೂಜಾರಿ ಅವರು ಪತ್ನಿ ಶಾಂತಾ, ಮಕ್ಕಳಾದ ಸ್ವಾತಿ, ಶಶಿಧರ್ ಹಾಗೂ ಶ್ರುತಿ ಅವರ ಹೆಸರಿನಲ್ಲಿ ಇರುವ ಆಸ್ತಿಗಳ ವಿವರವನ್ನು ಸಲ್ಲಿಸಿದ್ದು ಕೋಟ ಶ್ರೀನಿವಾಸ ಪೂಜಾರಿ ಅವರ ಕೈಯಲ್ಲಿ 90 ಸಾವಿರ ನಗದು ಹಣ ಇದ್ದು, ಹೆಂಡತಿ ಕೈಯಲ್ಲಿ 20 ಸಾವಿರ ಹಣ ಇದೆ. ಜೊತೆಗೆ ಕೋಟ ಅವರ ಕುಟುಂಬ ಒಟ್ಟು 1,04,44,645 ರೂಪಾಯಿ ಸಾಲ ಹೊಂದಿದೆ.
ಕೋಟ ಶ್ರೀನಿವಾಸ ಪೂಜಾರಿ ಅವರ ಕುಟುಂಬ ಸ್ಥಿರಾಸ್ತಿ ವಿವರ ಹೀಗಿದೆ:
* ಕೋಟ ಶ್ರೀನಿವಾಸ ಪೂಜಾರಿ ಅವರ ಬಳಿಯಲ್ಲಿ 79,95,082 ಎಪ್ಪತ್ತೊಂಬತ್ತು ಲಕ್ಷದ ತೊಂಬತ್ತೈದು ಸಾವಿರದ ಎಂಬತ್ತೆರಡು ರೂಪಾಯಿ
* ಪತ್ನಿ ಸಹನಾ ಅವರ ಬಳಿ ಇರುವ ಸ್ಥಿರಾಸ್ತಿ 1,62,79,027 ( ಒಂದು ಕೋಟಿಯ ಅರುವತ್ತೆರಡು ಲಕ್ಷದ ಎಪ್ಪತ್ತೋಂಬತ್ತು ಸಾವಿರದ ಇಪ್ಪತ್ತೇಳು ರೂಪಾಯಿ)
* ಮಗಳು ಸ್ವಾತಿ ಅವರ ಬಳಿ ಇರುವ ಸ್ಥಿರಾಸ್ತಿ 3,70,00 (ಮೂರು ಲಕ್ಷದ ಎಪ್ಪತ್ತು ಸಾವಿರ) ಮಗ ಶಶಿಧರ್ ಬಳಿ ಇರುವ ಸ್ಥಿರಾಸ್ತಿ 47,59,935 (ನಲುವತ್ತೇಳು ಲಕ್ಷದ ಐವತ್ತೊಂಬತ್ತು ಸಾವಿರದ ಒಂಬೈನೂರ ಮುವತ್ತೈದು ರೂಪಾಯಿ)
* ಮಗಳು ಶೃತಿ ಬಳಿ ಇರುವ ಸ್ಥಿರಾಸ್ಥಿ 66,466 (ಅರುವತ್ತಾರು ಸಾವಿರದ ನಾನೂರ ಅರುವತ್ತಾರು) ಕೋಟ ಶ್ರೀನಿವಾಸ ಪೂಜಾರಿ ಅವರ ಕುಟುಂಬದ ಒಟ್ಟು ಸ್ಥಿರಾಸ್ತಿ ಮೌಲ್ಯ 2,94,70,510 (ಎರಡು ಕೋಟಿ ತೊಂಬತ್ತನಾಲ್ಕು ಲಕ್ಷದ ಎಪ್ಪತ್ತು ಸಾವಿರದ ಐನೂರ ಹತ್ತು ರೂಪಾಯಿ) ಹೀಗಾಗಿ ಸಿಂಪಲ್ ಮ್ಯಾನ್ ಕೋಟ ಶ್ರೀನಿವಾಸ ಪೂಜಾರಿಯವರ ಕುಟುಂಬ ಕೋಟ್ಯಧಿಪತಿ ಅನ್ನೋದು ಅವರು ಸಲ್ಲಿಸಿದ ಆಸ್ತಿ ವಿವರದಿಂದ ಬಹಿರಂಗವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296