ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ಸಂಭ್ರಮ ಜೋರಾಗಿವೆ. ಈ ಅದ್ದೂರಿ ವಿವಾಹ ಸಮಾರಂಭಕ್ಕೆ ಜನಪ್ರಿಯ ಗಾಯಕಿ ರಿಯಾನಾ ಕೂಡ ಆಗಮಿಸಿದ್ದು, ಅಂಬಾನಿ ಕುಟುಂಬದವರು 74 ಕೋಟಿ ರೂಪಾಯಿ ಸಂಭಾವನೆ ನೀಡಿದ್ದಾರೆ ಎನ್ನಲಾಗಿದೆ.

ಇದೀಗ ಈ ಖ್ಯಾತ ಗಾಯಕಿ ಹಾಕಿಕೊಂಡಿರುವ ಈ ಹೆಡ್ ಫೋನ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಹೆಡ್ ಫೋನ್ ಡಿಸೈನ್ ನಿಂದ ಮಾತ್ರವಲ್ಲ ಇದರ ಬೆಲೆಯಿಂದಲೂ ಹೆಸರು ಮಾಡಿದೆ. @rihannaofficiall ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಶೇಷ ಹೆಡ್ ಪೋನ್ ಫೋಟೋ ಹಂಚಿಕೊಂಡಿದ್ದು, ಫೋಟೋದಲ್ಲಿ ಖ್ಯಾತ ಗಾಯಕಿ ರಿಯಾನಾ ಹೆಡ್ ಫೋನ್ ಧರಿಸಿದ್ದಾರೆ.
ಈ ಹೆಡ್ ಫೋನ್ ಬೆಲೆ 9,000 ಡಾಲರ್ ಅಂದರೆ 7ಲಕ್ಷದ 46ಸಾವಿರ ರೂಪಾಯಿ ಎನ್ನಲಾಗಿದೆ. ಈ ಹೆಡ್ ಫೋನ್ ಅನ್ನು ಚಿನ್ನದಿಂದ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


