ಉತ್ತರ ಪ್ರದೇಶದಲ್ಲಿ 12ನೇ ತರಗತಿ ವಿದ್ಯಾರ್ಥಿಯ ಮುಖದ ಮೇಲೆ ಯುವಕರ ಗುಂಪೊಂದು ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ.
ಸಂಬಂಧಿಕರ ಮನೆಯಿಂದ ಹಿಂತಿರುಗುವಾಗ ಯುವಕನನ್ನು ಅಪಹರಿಸಿದ ನಂತರ ಹಿಂಸಾಚಾರ ನಡೆಸಲಾಗಿದೆ. ವಿದ್ಯಾರ್ಥಿಗೆ ಯುವಕರು ಮಾರಣಾಂತಿಕವಾಗಿ ಥಳಿಸಿದ್ದಾರೆ. ಘಟನೆಯ ಬಳಿಕ ಪೊಲೀಸರು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 13 ರಂದು ಉತ್ತರ ಪ್ರದೇಶದ ಮೀರತ್ ನಲ್ಲಿ ಈ ಘಟನೆ ನಡೆದಿದೆ. ಯುವಕರು ವಿದ್ಯಾರ್ಥಿಗೆ ಥಳಿಸಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋ ಇದೀಗ ಹೊರಬಿದ್ದಿದೆ.
ಮೊದಲ ವಿಡಿಯೋದಲ್ಲಿ ಆರೋಪಿಗಳಲ್ಲಿ ಒಬ್ಬ ವಿದ್ಯಾರ್ಥಿಯ ತಲೆ ಮತ್ತು ಬೆನ್ನಿಗೆ ಪದೇ ಪದೇ ಹೊಡೆಯುತ್ತಿರುವುದನ್ನು ಕಾಣಬಹುದು. ಇತರರು ಬಾಲಕನ ಸುತ್ತಲೂ ನಿಂತು ವಿದ್ಯಾರ್ಥಿಗೆ ಹೊಡೆಯದಂತೆ ಮನವಿ ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಇದೇ ಕೃತ್ಯದ ಮುಂದುವರಿದ 2ನೇ ವಿಡಿಯೋ ಅತ್ಯಂತ ಆಘಾತಕಾರಿಯಾಗಿ ಕಂಡು ಬಂದಿದ್ದು, ವಿದ್ಯಾರ್ಥಿ ಮುಖದ ಮೇಲೆ ಪಾಪಿಗಳು ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡು ಬಂದಿದೆ.
ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಬಂಧಿಕರ ಮನೆಯಿಂದ ವಾಪಸ್ಸಾಗುತ್ತಿದ್ದ ನನ್ನ ಮಗನನ್ನು ಅಪಹರಿಸಿ ಕೆಲವರು ಥಳಿಸಿ ಮುಖ ಮೂತ್ರ ವಿಸರ್ಜನೆ ಮಾಡಿದ್ದಾರೆ.
ಸಂಬಂಧಿಕರ ಮನೆಗೆ ಹೋದ ಮಗ ತಡರಾತ್ರಿಯಾದರೂ ಮನೆ ತಲುಪಿರಲಿಲ್ಲ. ದೂರಿನ ಪ್ರಕಾರ, ತಂದೆ ಆ ಪ್ರದೇಶದಲ್ಲಿ ಹುಡುಕಾಡಿದರೂ ಪತ್ತೆಯಾಗದ ಕಾರಣ ಮರುದಿನ ಬೆಳಿಗ್ಗೆ ಮಗ ಮನೆಗೆ ಬಂದು ಘಟನೆಯನ್ನು ವಿವರಿಸಿದ್ದಾನೆ.
ಆರೋಪಿಗಳ ಪೈಕಿ ನಾಲ್ವರಲ್ಲಿ ಮೂವರನ್ನು ಬಂಧಿಸಲಾಗಿದೆ. ಘಟನೆಯ ತನಿಖೆ ಮುಂದುವರಿದಿದ್ದು, ಇತರ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


