nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗುಬ್ಬಿ:  ಶ್ರೀ ಕೆಂಪಮ್ಮ ದೇವಿ, ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ

    February 12, 2026

    ಆಸ್ತಿ ಬರೆಸಿಕೊಂಡ ನಂತರ ತಂದೆಯನ್ನು ತಿರುಗಿ ನೋಡದ ಪುತ್ರಿಯರಿಗೆ ಕಾನೂನಿನ ಪಾಠ ಕಲಿಸಿದ ತಂದೆ!

    February 12, 2026

    ರಾಜಕೀಯ ಸಾಕಾಗಿದೆ ಅಂತ ನೀನು ಹೇಳ ಬೇಡ, ಅದನ್ನು ಜನ ಹೇಳುತ್ತಾರೆ: ಕೆ.ಎನ್.ರಾಜಣ್ಣಗೆ ಸಚಿವ ಪರಮೇಶ್ವರ್ ಕಿವಿಮಾತು

    February 12, 2026
    Facebook Twitter Instagram
    ಟ್ರೆಂಡಿಂಗ್
    • ಗುಬ್ಬಿ:  ಶ್ರೀ ಕೆಂಪಮ್ಮ ದೇವಿ, ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ
    • ಆಸ್ತಿ ಬರೆಸಿಕೊಂಡ ನಂತರ ತಂದೆಯನ್ನು ತಿರುಗಿ ನೋಡದ ಪುತ್ರಿಯರಿಗೆ ಕಾನೂನಿನ ಪಾಠ ಕಲಿಸಿದ ತಂದೆ!
    • ರಾಜಕೀಯ ಸಾಕಾಗಿದೆ ಅಂತ ನೀನು ಹೇಳ ಬೇಡ, ಅದನ್ನು ಜನ ಹೇಳುತ್ತಾರೆ: ಕೆ.ಎನ್.ರಾಜಣ್ಣಗೆ ಸಚಿವ ಪರಮೇಶ್ವರ್ ಕಿವಿಮಾತು
    • ಗಂಡನಿಂದ ಮಾರಣಾಂತಿಕ ಹಲ್ಲೆ: ಮಹಿಳಾ ಆಯೋಗದ ಅಧ್ಯಕ್ಷೆಯ ಕಾಲು ಹಿಡಿದು ಕಣ್ಣೀರು ಹಾಕಿದ ಸಂತ್ರಸ್ತೆಯರು
    • ಫೆ. 17, 18ರಂದು ಪ.ಜಾ., ಪ.ಪ. ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ
    • ರಾಜ್ಯದಲ್ಲಿ 8 ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
    • ಮಹಿಳೆಯರಿಗೆ ಸುವರ್ಣಾವಕಾಶ: ಟೈಲರಿಂಗ್ ತರಬೇತಿಗೆ ಅರ್ಜಿ ಸಲ್ಲಿಸಿ
    • ಗುಂಪುಗಾರಿಕೆ ನಿಲ್ಲಿಸಿ | ದೊಡ್ಡಘಟ್ಟ ಚಂದ್ರೇಶ್ ಗೆ ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರ್ ನಾನು ಆನೆಸ್ಟ್ ಅಲ್ಲ ಬಟ್, ಕರೆಪ್ಟ್ ಅಲ್ಲ: ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ಎಸ್.ಪಿ.ಮುದ್ದಹನುಮೇಗೌಡ
    ತುಮಕೂರು March 27, 2024

    ಸರ್ ನಾನು ಆನೆಸ್ಟ್ ಅಲ್ಲ ಬಟ್, ಕರೆಪ್ಟ್ ಅಲ್ಲ: ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ಎಸ್.ಪಿ.ಮುದ್ದಹನುಮೇಗೌಡ

    By adminMarch 27, 2024No Comments3 Mins Read
    muddahanume gowda

    ತುಮಕೂರು: ಲೋಕಸಭೆ ಅತ್ಯಂತ ಪ್ರಮುಖವಾದ ಮನೆ. ದೇಶ ಯಾವರೀತಿ ಸಾಗಬೇಕು ಎಂಬುದರ ಬಗ್ಗೆ ಗಂಭೀರವಾದ ತೀರ್ಮಾನ ತೆಗೆದುಕೊಳ್ಳುವ ಮನೆಯಾಗಿದೆ. ಕಾನೂನುಗಳನ್ನು ರಚನೆ ಮಾಡುವ ಮನೆಯಾಗಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.

    ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಹುತೇಕ ಸ್ಪರ್ಧಿಗಳು ವಕೀಲರಾಗಿದ್ದಾರೆ ಎಂದರು.


    Provided by
    Provided by

    ನಾನು ಲೋಕಸಭಾ ಸದಸ್ಯನಾದ ಮೇಲೆ ಎಚ್ ಎಎಲ್ ಕಾರ್ಖಾನೆ ಜಾಗವನ್ನು ಇಸ್ರೊಗೆ ನೀಡಲಾಗಿದೆ. ಎಚ್‌ ಎಂಟಿ ಶಿಫ್ಟ್ ಮಾಡಬೇಕು ಅಂತಾ ಗೋವಾಕ್ಕೆ ನಿರ್ಧಾರ ಆಯಿತು. ಆದರೆ ನಾನು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಬಹಳ ಹೋರಾಟ ಮಾಡಿದ ಕಾರಣ ಅದನ್ನು ಉಳಿಸಿಕೊಳ್ಳಲು ಸಾಧ್ಯವಯಿತು. ಜನಗಳ ಹಣವನ್ನು ಸದ್ವಿನಿಯೋಗ ಪಡಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದೇನೆ. ತೆಂಗು ಬೆಲೆ ಕುಸಿತವಾಗಿದೆ. ನಾನು ಇದ್ದಾಗ ಅದರ ಬಗ್ಗೆ ಚರ್ಚೆ ಮಾಡಿ 18 ಸಾವಿರ ನೀಡಲಾಗಿತ್ತು. ಆದರೆ ಈಗ ಕುಸಿತವಾಗುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಸ್ತಾಪ ಮಾಡಿದ್ದೆ ಹಾಗಾಗಿ ಕೊಬ್ಬರಿ ಬೆಲೆ ಏರಿಕೆಯಾಗಿತ್ತು. 25 ಕೋಟಿ ರೂ. ಅನ್ನು ಅಭಿವೃದ್ಧಿ ಕಾಮಗಾರಿ ಮಾಡಿದ್ದೇನೆ. ಒಂದೂ ರೂ ವ್ಯರ್ಥ ಮಾಡಲು ಬಿಡಲಿಲ್ಲ. ಕುಡಿಯುವ ನೀರು, ಸಮುದಾಯದ ಅಭಿವೃದ್ಧಿಗೆ ವಿನಿಯೋಗಿದಲಾಗಿದೆ ಎಂದರು.

    ಎಚ್‌ ಎಎಲ್ ಆರಂಭ ಮಾಡಿದ್ದಾರೆ. ಅದರಲ್ಲಿ ಕೌಶಲ್ಯತೆ ಕೊಡುತ್ತಿದ್ದಾರೆ. ಸಂಪೂರ್ಣವಾಗಿ ಆರಂಭವಾದಾಗ ಉದ್ಯೋಗ ಸಿಗುತ್ತದೆ. ಸ್ವಾವಲಂಬಿಯಾಗಿ ಉತ್ಪಾದನೆ ಮಾಡಿ ಉಡಾವಣೆ ಮಾಡಲಾಗುತ್ತದೆ ಎಂದರು.

    ತೆಂಗಿನ ಉತ್ಪನ್ನ ಖರೀದಿ ಮಾಡುವ ಕಾಲ ಬರುತ್ತದೆ. ಬಹಳ ಡಿಮ್ಯಾಂಡ್ ಬರುತ್ತದೆ. ಜಿಲ್ಲೆಯಲ್ಲಿ ಚರ್ಚೆಯಲ್ಲಿರುವ ಹೆಲಿಕ್ಯಾಪ್ಟರ್ ಘಟಕ(ಏರ್ಪೋಟ್) ಬರುತ್ತೆ ಎಂಬ ಬಗ್ಗೆ ಯಾವುದೇ ಅಧಿಕೃತ ಆದೇಶ ಆಗಿಲ್ಲ. ಚರ್ಚೆಯಾಗುತ್ತಿದೆ ಎಂದರು.

    ಸ್ಮಾರ್ಟ್ ಸಿಟಿ ನಮ್ಮೂರಿಗೆ ಬಂತು ಸಮಾಧಾನ ಇದೆ. ಆದರೆ ಗುಣಮಟ್ಟ ಹೇಗಿದೆ ಅನ್ನೋದು ಜನರು ಗಮನಿಸುತ್ತಿರುತ್ತಾರೆ. ಅದರ ಬಗ್ಗೆ ಮಾತನಾಡೋದು ಸಮಂಜಸವಲ್ಲ ಎಂದರು.

    ಸ್ಮಾರ್ಟ್ ಸಿಟಿಗೆ ಹೊಸ ರೂಪು ರೇಷೆ ಕೊಡಬೇಕು. ಆ ಬಗ್ಗೆ ಚಿಂತನೆ ನಡೆಸುತ್ತೇನೆ. ಈಗಾಗಲೇ ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿಗಳನ್ನು ಗಮನಿಸಿದ್ದೇನೆ. ಹೈನುಗಾರಿಕೆಗೆ ಉತ್ತೇಜನ ಕೊಡುವ ಬಗ್ಗೆಯೂ ಕ್ರಮ ವಹಿಸಲಾಗುವುದು. ಹಳ್ಳಿಕಾರ್ ತಳಿ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ. ಮೇವು ಬೆಳೆಯುವುದಕ್ಕೆ ಪೂರಕ ಕೆಲಸ ಮಾಡುತ್ತೇನೆ ಎಂದರು.

    ಸಂಸದನಾದ ಬಳಿಕ ಕುಣಿಗಲ್ ಗೆ ಭೇಟಿ ಕೊಡುತ್ತೇನೆ. ಜನ ತುಂಬಾ ಜಾಗೃತರಿದ್ದಾರೆ. ನನ್ನ ಸೀಟು ಮಾಜಿ ಪ್ರಧಾನಿಗೆ ಹೋಗಿದೆ ಎಂದು ಸಮಾಧಾನಯಿತ್ತು. ಅವರನ್ನ ಗೆಲ್ಲಿಸಬೇಕು ಎಂದು ನಾವೇ ಸ್ವಯಂ ಹೋಗಿ ಭಾಷಣ ಮಾಡಿದ್ದೇನೆ ಎಂದರು. ನಾನು ನನ್ನ ಸೀಟನ್ನು ತ್ಯಾಗ ಮಾಡಿದ್ದೇನೆ. ಸಣ್ಣ ಆರೋಪ ಬಂದಾಗ ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡಿದ್ದೇನೆ. ಹೇಮಾವತಿ ಕುಣಿಗಲ್ ಎಕ್ಸ್ ಪ್ರೆಕ್ಸ್ ಕೆನಾಲ್ ಮಾಡೋಕೆ ವಿರೋಧ ಮಾಡಿದ್ದೇ. ತುಮಕೂರು ಜಿಲ್ಲೆಯ ನಿರ್ಧಾರಕ್ಕೆ ಬದ್ಧ. ನಾಲೆಯನ್ನ ಆಧುನಿಕರಣ ಮಾಡಿ ತೆಗೆದುಕೊಂಡು ಹೋಗಿ ಎಂದಿದ್ದೆ. ಕೆರೆಗಳ ಸಂರಕ್ಷಣೆ ಆಗಬೇಕು. ಬಹುತೇಕ ಕೆರೆಗಳು ಮುಚ್ಚಿಹೋಗಿವೆ. ಅದರ ಬಗ್ಗೆಯೂ ಹೆಚ್ಚಿನ ಒತ್ತು ಕೊಡಲಾಗುವುದು. ಸುಸ್ಥಿರ ಅಭಿವೃದ್ಧಿಗಾಗಿ ನಾನು ಪಾರ್ಲಿಮೆಂಟ್‌ನಲ್ಲಿ ಮಾತಾಡಿದ್ದೇನೆ. ಪ್ರಸ್ತಾಪ ಮಾಡಿದ್ದೇನೆ. ನನಗೆ ಇಷ್ಟವಾದ ವಿಷಯವಾಗಿದೆ ಎಂದರು.

    ಲೋಕಸಭೆಗೆ ಹೋಗಬೇಕಾದವರು ಕಾನೂನು ರಚಿಸುವುದಕ್ಕೆ ಹೋಗಬೇಕು. ತುಮಕೂರು ಚಿತ್ರಣ ಅರಿತು ಜನರ ಧ್ವನಿಯಾಗಿ ಕೆಲಸ ಮಾಡಬೇಕು. ನಾನು ಉತ್ತಮ ಅಂದರೆ ನನ್ನನ್ನ ಕಳುಹಿಸಿ. ನಾನು ಉತ್ತಮ ವ್ಯಕ್ತಿ. ತುಮಕೂರು ಲೋಕಸಭೆ ಸ್ಪರ್ಧಿಸಲು ಯೋಗ್ಯನಿದ್ದೇನೆ. ಜಿಲ್ಲೆಯ ಎಲ್ಲಾ ಮತದಾರನ್ನು ಕೇಳುತ್ತೇನೆ ಎಂದರು. ನನ್ನ ಮನಸಿಗೆ ಇಷ್ಟವಾಗೋದು ಕಾಂಗ್ರೆಸ್ ಪಕ್ಷ. ನಮ್ಮ ಪಕ್ಷದ ಸಿದ್ದಾಂತಗಳೇ ಇಷ್ಟವಾಗುತ್ತದೆ. ಹಣದ ಮೇಲೆ ಚುನಾವಣಾ ಮಾಡುತ್ತೇನೆ ಎನ್ನೋದು ಮುಂದಿನ ದಿನಗಳಲ್ಲಿ ಅದು ಬಾರಿ ಅಪಾಯಕಾರಿಯಾಗುತ್ತದೆ ಸಮಾಜಕ್ಕೆ ನನ್ನನ್ನು ಯಾರು ಇವತ್ತಿನವರೆಗೂ ಪ್ರಶ್ನೆ ಮಾಡಿಲ್ಲ. ಅಷ್ಟು ಅದೃಷ್ಟವಂತ ಎಂದರು.

    ನೈತಿಕತೆ ಯಾರಿಗೆ ಇದೆ ತೋರಿಸಿ. ನೈತಿಕತೆಗೆ ಎದುರಿಕೊಂಡೆ ನಾನು ಕ್ಷಮೆ ಕೇಳಿದ್ದೇನೆ. ನಾನು ಕರೆಕ್ಟ್ ಮ್ಯಾನ್ ಆಗಿದ್ದೇನೆ ಎಂದರು.

    ಸರ್ ನಾನು ಆನೆಸ್ಟ್ ಅಲ್ಲ. ಬಟ್ ನಾನು ಕರೆಪ್ಟ್ ಅಲ್ಲ ಅಂದರು. ಶ್ರೀ ಶ್ರೀ ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಕೊಡಬೇಕು ಅನ್ನೋದು ನನ್ನ ಕೊನೆ ಭಾಷಣ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಕೆಯುಡಬ್ಲುಎಂಜೆ ಜಿಲ್ಲಾಧ್ಯಕ್ಷ ಚಿ.ನಿ.ಪರುಷೋತ್ತಮ್, ಪ್ರಜಾಪ್ರಗತಿ ಸಹಸಂಪಾದಕ ಟಿ.ಎನ್.ಮಧುಕರ್, ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಂ ಮತ್ತು ಎಲ್ಲಾ ಪತ್ರಕರ್ತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಆಸ್ತಿ ಬರೆಸಿಕೊಂಡ ನಂತರ ತಂದೆಯನ್ನು ತಿರುಗಿ ನೋಡದ ಪುತ್ರಿಯರಿಗೆ ಕಾನೂನಿನ ಪಾಠ ಕಲಿಸಿದ ತಂದೆ!

    February 12, 2026

    ಫೆ. 17, 18ರಂದು ಪ.ಜಾ., ಪ.ಪ. ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ

    February 11, 2026

    ರಾಜ್ಯದಲ್ಲಿ 8 ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

    February 11, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಗುಬ್ಬಿ

    ಗುಬ್ಬಿ:  ಶ್ರೀ ಕೆಂಪಮ್ಮ ದೇವಿ, ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ

    February 12, 2026

    ಗುಬ್ಬಿ: ತಾಲೂಕಿನ ಕಸಬಾ ಹೋಬಳಿಯ ಹೊದಲೂರು ಗ್ರಾಮದ  ಶ್ರೀ ಕೆಂಪಮ್ಮ ದೇವಿ ಮತ್ತು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ…

    ಆಸ್ತಿ ಬರೆಸಿಕೊಂಡ ನಂತರ ತಂದೆಯನ್ನು ತಿರುಗಿ ನೋಡದ ಪುತ್ರಿಯರಿಗೆ ಕಾನೂನಿನ ಪಾಠ ಕಲಿಸಿದ ತಂದೆ!

    February 12, 2026

    ರಾಜಕೀಯ ಸಾಕಾಗಿದೆ ಅಂತ ನೀನು ಹೇಳ ಬೇಡ, ಅದನ್ನು ಜನ ಹೇಳುತ್ತಾರೆ: ಕೆ.ಎನ್.ರಾಜಣ್ಣಗೆ ಸಚಿವ ಪರಮೇಶ್ವರ್ ಕಿವಿಮಾತು

    February 12, 2026

    ಗಂಡನಿಂದ ಮಾರಣಾಂತಿಕ ಹಲ್ಲೆ: ಮಹಿಳಾ ಆಯೋಗದ ಅಧ್ಯಕ್ಷೆಯ ಕಾಲು ಹಿಡಿದು ಕಣ್ಣೀರು ಹಾಕಿದ ಸಂತ್ರಸ್ತೆಯರು

    February 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.