ತುಮಕೂರು: ನಗರದ ಸಿದ್ದಗಂಗಾ ತಾಂತ್ರಿಕ ವಿದ್ಯಾಲಯದ ಪ್ರೊ.ಡಾ.ನಾಗರಾಜು ಅವರು ಅಮೆರಿಕಾದ ಸ್ಟನ್ ಫರ್ಡ್ ವಿಶ್ವವಿದ್ಯಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಶ್ವದ ಶ್ರೇಷ್ಠ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯವಾಗಿ ಪ್ರಕಟವಾದ ಸಂಶೋಧನಾ ಪ್ರಕಟಣೆಗಳು ಉಲ್ಲೇಖಗಳು, ಸಹಲೇಖನ, ಸಂಶೋಧನಾ ಪ್ರಕಟಣೆಗಳು ಮತ್ತು ಹೆಚ್ ಇಂಡೆಕ್ಸ್ಗಳನ್ನು ಪರಿಶೀಲಿಸಿದ ನಂತರ ವಿಶ್ವದ ಶೇ. 2ರಷ್ಟು ಅಗ್ರ ವಿಜ್ಞಾನಿಗಳ ಪಟ್ಟಿಯನ್ನು ಸ್ಟನ್ ಫರ್ಡ್ ವಿಶ್ವವಿದ್ಯಾಲಯವು ಇತ್ತೀಚಿಗೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ತುಮಕೂರು ಜಿಲ್ಲೆಯಿಂದ ಏಳು ಜನ ಪ್ರಾಧ್ಯಾಪಕರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಈ ಪೈಕಿ ಮೊದಲನೆಯವರು ಡಾ.ಜಿ.ನಾಗರಾಜು, ಇವರ ವಿಶ್ವ ರ್ಯಾಂಕಿಂಗ್ 62446 ನೇ ಸ್ಥಾನದಲ್ಲಿ ಗುರುತಿಸಿಕೊಂಡು ತುಮಕೂರು ಜಿಲ್ಲೆಯ ಹಿರಿಮೆಗೆ ಪಾತ್ರರಾಗಿದ್ದಾರೆ.
ಈ ಪಟ್ಟಿಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಡಾ.ಎಚ್.ನಾಗಭೂಷಣ 1,11012ನೇ ಸ್ಥಾನ, ಡಾ.ಸುರೇಶ್ ಡಿ. ರವರು 1,53076 ನೇ ಸ್ಥಾನ, ಗಿರೀಶ್ ಕೆ.ಎಸ್. 227464 ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.
ಡಾ.ನಾಗರಾಜು ಕೊರಟಗೆರೆ ತಾಲ್ಲೂಕಿನ ಗಿಡಗನ ಹಳ್ಳಿಯವರು. ಇವರು ಎನರ್ಜಿ ಮೆಟೀರಿಯಲ್ಸ್ ಫಾರ್ ಬ್ಯಾಟರಿ ಅಂಡ್ ಫುಯಲ್ ಪ್ರೊಡಕ್ಷನ್ ಮೇಲೆ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಇವರು 365 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಮತ್ತು ಇವರ ಸೈಟೇಷನ್ಸ್ 9000 ಇದೆ. ಇವರು ಸುಮಾರು 3 ಕೋಟಿ ಅನುದಾನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಂಶೋಧನೆಗಾಗಿ ಎಸ್ ಐಟಿಗೆ ತಂದಿದ್ದಾರೆ. ಇವರ ಈ ಸಂಶೋಧನೆ ವೈಜ್ಞಾನಿಕ ಸಮುದಾಯಕ್ಕೆ ದೊಡ್ಡ ಕೊಡುಗೆಯಾಗಿದೆ. ಇವರ ಈ ಕೊಡುಗೆ ತುಮಕೂರು ಜಿಲ್ಲೆಗೆ ವಿಶ್ವ ಮಟ್ಟದಲ್ಲಿ ಹೆಸರು ತಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q