ತುಮಕೂರು: ಸಹಕಾರಿ ಸಚಿವರ ತವರಲ್ಲಿ 40% ಕಮಿಷನ್ ಆರೋಪ ಕೇಳಿ ಬಂದಿದೆ. ಭ್ರಷ್ಟಾಚಾರದ ಆಡಿಯೋ ವಿಡಿಯೋ ನಮ್ಮತುಮಕೂರು ವಾಹಿನಿಗೆ ಲಭ್ಯವಾಗಿದೆ.
ಕಾಂಗ್ರೆಸ್ ಸರ್ಕಾರದ ಮೇಲೆ ಬಿಜೆಪಿ ಪಕ್ಷ ನಿರಂತರ 40% ಪರ್ಸೆಂಟ್ ಆರೋಪ ಮಾಡುತ್ತಲೇ ಬಂದಿದೆ. ಆದ್ರೆ ಯಾವುದೇ ಸಾಕ್ಷಿ ಆಧಾರ ಸಿಕ್ಕಿರಲಿಲ್ಲ, ಇದೀಗ ಈ ಆಡಿಯೋ ವಿಡಿಯೋ ಪರ್ಸಂಟೇಜ್ ಭ್ರಷ್ಟಾಚಾರದ ಕರಾಳಮುಖವನ್ನು ಬಯಲು ಮಾಡಿದೆ.
ಇಬ್ಬರು ಪ್ರಭಾವಿ ಸಚಿವರು ಇರುವ ತುಮಕೂರು ಜಿಲ್ಲೆಯ ಮಧುಗಿರಿ ಪಿಡಬ್ಲ್ಯೂಡಿ ಎಇಇ ರಾಜಗೋಪಾಲ್ 3 ಲಕ್ಷ 20 ಸಾವಿರ ಮುಂಗಡ ಲಂಚ ಪಡೆದ ಘಟನೆ ನಡೆದಿದೆ.
20 ಲಕ್ಷದ ಪಿಡ್ಲ್ಯೂಡಿ ಇಲಾಖೆಯ ಕಾಮಗಾರಿಯ ಕೊಡುವುದಾಗಿ 3ಲಕ್ಷ 20 ಸಾವಿರ ಅಡ್ವಾನ್ಸ್ ಕಮಿಷನ್ ಪಡೆದ ಕಥೆ ಇದು ನೋಡಿ.
ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಕ್ಷೇತ್ರದ ಪಿಡ್ಲ್ಯೂಡಿ ಇಲಾಖೆಯ ಎಇಇ ಲಂಚಬಾಕತನ ಬಯಲಾಗಿದೆ. ಕೊನೆಗೆ 20 ಲಕ್ಷ ಅನುದಾನವು ಇಲ್ಲ.. ಲಂಚ ಪಡೆದ ಕಮಿಷನ್ ಹಣವೂ ನೀಡದೇ ಗುತ್ತಿಗೆದಾರನಿಗೆ ಬೇರೊಬ್ಬರ ಚೇಕ್ ನೀಡಿ ವಂಚಿಸಿದ ಆರೋಪ ಪಿಡ್ಲ್ಯೂಡಿ ಎಇಇ ವಿರುದ್ಧ ಕೇಳಿ ಬಂದಿದೆ.
ಮಧುಗಿರಿ ತಾಲೂಕು ಪಿಡ್ಲ್ಯೂಡಿ ಇಲಾಖೆಯ ಎಇಇ ರಾಜಗೋಪಾಲ ಎಂಬಾತ ಪಿಡ್ಲ್ಯೂಡಿ ಗುತ್ತಿಗೆದಾರ ಶ್ರೀರಂಗ ಎಂಬಾತನ ಹೆಸರಿನಲ್ಲಿ 3 ಲಕ್ಷ 20 ಸಾವಿರದ ಚೆಕ್ ನೀಡಿರುವುದಾಗಿ ಬ್ರಹ್ಮಸಮುದ್ರ ಗ್ರಾಪಂಯ ಮಾಜಿ ಅಧ್ಯಕ್ಷ ಚೀಲನಹಳ್ಳಿ ಸುರೇಶ್ ಎಂಬವರು ಮಾಧ್ಯಮದ ಮುಂದೆ ಗಂಭೀರ ಆರೋಪ ಮಾಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಹೆಚ್ಚಿದ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. 20ಲಕ್ಷದ ಕೆಲಸದ ಕಾಮಗಾರಿಯ ಗುತ್ತಿಗೆ ನೀಡುವ ಆಮಿಷವೊಡ್ಡಿ ಶ್ರೀರಂಗನ ಮೂಲಕ ಪಿಡ್ಲ್ಯೂಡಿ ಎಇಇ 3 ಲಕ್ಷ 20 ಸಾವಿರ ರೂ. ಲಂಚ ಪಡೆದ ಆರೋಪ ಇದೀಗ ಕೇಳಿ ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————