ಬೆಂಗಳೂರು: ವಿವಿ ಪುರಂ ಟೆಂಪಲ್ ಸ್ಟ್ರೀಟ್ ಬಳಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಿಗರೇಟ್ ಸೇದುತ್ತ ನಿಂತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ವಿದ್ಯಾರ್ಥಿಗಳ ಫೋಟೋ ತೆಗೆದು ವಿವಿ ಪುರಂ ಪೊಲೀಸರಿಗೆ ಟ್ಯಾಗ್ ಮಾಡಿ ಕಳುಹಿಸಿ, ಕ್ರಮಕ್ಕೆ ಮನವಿ ಮಾಡಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಪೊಲೀಸರು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಇದಕ್ಕೆ ಕ್ಯಾರೇ ಅನ್ನದ ವಿದ್ಯಾರ್ಥಿಗಳು ಮಾತ್ರ ಸಾರ್ವಜನಿಕ ಸ್ಥಳಗಳಲ್ಲೇ ಸಿಗರೇಟ್ ಸೇವನೆ ಮಾಡಿದ್ದಾರೆ.


