ಸಕಾಲಕ್ಕೆ ಮಳೆ ಬಾರದ ಹಿನ್ನೆಲೆ ಇಳುವರಿ ಕಡಿಮೆ ಆಗಿ ಮೆಣಸಿನಕಾಯಿ ಬೆಲೆ ಗಗನಕ್ಕೇರಿದೆ. ಈ ಮೂಲಕ ಗ್ರಾಹಕರು ಕಂಗಾಲಾಗಿದ್ದಾರೆ. ಬಿಸಿಲಿನ ತೀವ್ರತೆಯಿಂದ ತರಕಾರಿ ದರವೂ ಹೆಚ್ಚಳವಾಗತೊಡಗಿದೆ. ತರಕಾರಿ ಬೆಳೆಯ ಮೇಲೆ ಗರಿಷ್ಠ ತಾಪಮಾನ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಹಿನ್ನೆಲೆ ಪೂರೈಕೆ ಕಡಿಮೆಯಾಗಿದೆ. ಇದರಿಂದಾಗಿ ಸಹಜವಾಗಿ ತರಕಾರಿ ಬೆಲೆ ಏರಿಕೆ ಕಂಡಿದೆ. ಇನ್ನು ಬೀನ್ಸ್, ಗೆಡ್ಡೆಕೋಸು, ಬೀಟ್ರೂಟ್, ಹೀರೇಕಾಯಿ ಎಲ್ಲದರ ದರವೂ ಏರಿಕೆ ಆಗಿದೆ. ಅದರ ಜೊತೆ ಹಸಿ ಮೆಣಸಿನಕಾಯಿ ರೇಟ್ ಸಹ ಹೆಚ್ಚಳವಾಗಿದೆ.
ಕಳೆದ ವಾರ 60 ರಿಂ 80 ರೂಪಾಯಿ ಇದ್ದ ಮೆಣಸಿನಕಾಯಿ ಬೆಲೆ, ಈ ವಾರ ದುಬಾರಿಯಾಗಿದೆ. 120 ರೂಪಾಯಿ ತಲುಪಿದೆ. ಕೊಳ್ಳುವಾಗಲೇ ಗ್ರಾಹಕರಿಗೆ ಖಾರವಾಗಿದೆ. ಇದೇ ರೀತಿ ರಾಜ್ಯದಲ್ಲಿ ಬಿಸಿಲು ಮುಂದುವರೆದರೆ ತರಕಾರಿ ರೇಟ್ ಇನ್ನೂ ಹೆಚ್ಚಳವಾಗಲಿದೆ. ಸದ್ಯ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಬೀನ್ಸ್ ಬೆಲೆಯು ಕೆಜಿಗೆ 250 ರೂಪಾಯಿಯ ಗಡಿ ದಾಟಿದೆ.
ಉಳಿದ ತರಕಾರಿಗಳ ಬೆಲೆಯೂ ಹೆಚ್ಚಾಗಿದೆ. ಇನ್ನು ಬೆಂಗಳೂರಲ್ಲಿ ಸದ್ಯ ಉತ್ತಮವಾಗಿ ಮಳೆಯಾಗುತ್ತಿದೆ. ಕಳೆದ ವಾರ ಎಳನೀರು ಬೆಲೆಯೂ ಸಹ ಹೆಚ್ಚಾಗಿತ್ತು. ಈಗಲೂ ಕೆಲವೆಡೆ 50 ರೂಪಾಯಿಗೆ ಒಂದು ಎಳನೀರು ಇದೆ. ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನ ತತ್ತರಿಸಿ ಹೋಗ್ತಾ ಇದ್ದಾರೆ. ಒಂದೆಡೆ ಬಿಸಿಲು ಸುಡ್ತಾ ಇದ್ರೆ, ಇನ್ನೊಂದೆಡೆ ಜೇಬು ಸುಡ್ತಿದೆ ಎಂದು ಹೇಳ್ತಾ ಇದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


