ಮಧುಗಿರಿ: ಪ್ರತೀ ವರ್ಷದಂತೆ ಈ ವರ್ಷವೂ ನವೆಂಬರ್ 26 ರಂದು ‘ಸಂವಿಧಾನ ದಿನ’ ಆಚರಿಸಲಾಗುತ್ತಿದೆ ,ಅದರ ಜೊತೆಗೆ ಈ ದಿನ ಇಲಾಖಾ ಮಾರ್ಗದರ್ಶನದಂತೆ ‘ಸಮಾಜ ವಿಜ್ಞಾನ ವಿಷಯದ ದಿನ’ ವನ್ನಾಗಿಯೂ ಸಹ ಆಚರಿಸುತ್ತಿದ್ದೇವೆ ಎಂದು ಕಾಯಕ್ರಮವನ್ನು ವಿಭಿನ್ನವಾಗಿ ಆಯೋಜಿಸಿದ್ದ ಶಾಲಾ ಶಿಕ್ಷಕ ಮಂಜುನಾಥ್ ಹೇಳಿದರು.
ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂದಪಟ್ಟಂತೆ ಹಲವಾರು ಭಾವಚಿತ್ರಗಳು ಮತ್ತು ಭೂಪಟಗಳನ್ನು ಪ್ರದರ್ಶಿಸಲಾಗಿತ್ತು. ಶಾಲಾ ಮಕ್ಕಳು ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ನೆಹರು, ಕಿತ್ತೂರು ರಾಣಿ ಚೆನ್ನಮ್ಮ, ಜಾನಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಟಿಪ್ಪು ಸುಲ್ತಾನ್, ಕೆಂಪೇಗೌಡ, ಕನಕದಾಸರು ಇನ್ನೂ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ, ರಾಷ್ಟ್ರನಾಯಕರ, ದಾರ್ಶನಿಕರ ಮತ್ತು ಸಮಾಜ ಸುಧಾರಕರ ವೇಷಭೂಷಣಗಳನ್ನು ತೊಟ್ಟು ಪಾತ್ರಾಭಿನಯ ಮಾಡಿದರು.
ಸದರಿ ಕಾಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ಸಂಯೋಜಕರಾದ ಹೇಮಲತಾರವರು ಮಾತನಾಡಿ ಮಕ್ಕಳಿಗೆ ಸಂವಿಧಾನದ ಪೀಠಿಕೆಯಲ್ಲಿನ ಸಮತಾವಾದ, ಜಾತ್ಯಾತೀತತೆ, ಸಮಾಜವಾದಿ ಧರ್ಮನಿರಪೇಕ್ಷತೆಗಳ ಅರ್ಥ ಮತ್ತು ಮಹತ್ವವನ್ನು ತಿಳಸಿದರು.
ಶಾಲಾ ಮಕ್ಕಳು ಈ ಎಲ್ಲಾ ಆದರ್ಶ ವ್ಯಕ್ತಿಗಳ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಮತ್ತೋರ್ವ ಅಥಿತಿಗಳಾದ ಬಿ.ಐ.ಇ.ಆರ್.ಟಿ. ದಾಸಣ್ಣರವರು ನುಡಿದರು.
ಗ್ರಾಮದ ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ರಾಜಣ್ಣರವರು ಡಾ.ಬಿ.ಆರ್. ಅಂಬೇಡ್ಕರ್ ರವರ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಜೀವನ, ಶಿಕ್ಷಣ ಮತ್ತು ಸಂವಿಧಾನದ ಮಹತ್ವವನ್ನು ಶಾಲಾ ಮಕ್ಕಳಿಗೆ ತಿಳಿಸಿದರು.
ಸಿ.ಆರ್.ಪಿ.ಗಳಾದ ಜಗದೀಶ್ ರವರು ಶಾಲೆಯಲ್ಲಿ ಇಂತಹ ವಿನೂತನವಾದ ಕಾರ್ಯಕ್ರಮಗಳಿಂದ ವಿಧ್ಯಾಥಿಗಳಿಗೆ ವಿಷಯ ಜ್ಞಾನವು ಹೆಚ್ಚುತ್ತದೆ, ಮಕ್ಕಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪೋಷಕರು ಮತ್ತು ಗ್ರಾಮಸ್ಥರು ಕಾರ್ಯಕ್ರಮ ವೀಕ್ಷಿಸಿ ಶಿಕ್ಷಕರಿಗೆ ಅಭಿನಂದಿಸಿದರು, ಮುಖ್ಯ ಶಿಕ್ಷಕಿ ನರಸಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಶಿಕ್ಷಕರಾದ ಮಂಜುನಾಥ್, ಶ್ರೀನಿವಾಸ್, ರೇಖಾ, ಮುಮ್ತಾಜ್ ಬೇಗಂ ಮತ್ತು ನಾಗಶ್ರೀ ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q