ಕೊರಟಗೆರೆ : ಮಕ್ಕಳ ಬೇಸಿಗೆ ರಜೆಯ ದಿನಗಳನ್ನು ಕಳೆಯಲು ಮಕ್ಕಳ ಪ್ರತಿಭೆಯನ್ನ ಹೆಚ್ಚಿಸಲು ಇಂದೇ ನಿಮ್ಮ ಮಕ್ಕಳನ್ನ ಕೊರಟಗೆರೆಯ ಆರ್ ಆರ್ ಸಮ್ಮರ್ ಕ್ಯಾಂಪ್ ಗೆ ಸೇರಿಸಿ ಎಂದು ಟ್ರೈನಿಂಗ್ ಸ್ಕೂಲ್ ಶಿಕ್ಷಕಿ ವಿಜಯಲಕ್ಷ್ಮೀ ಸಲಹೆ ನೀಡಿದರು.
ನಿಮ್ಮ ಮಕ್ಕಳಿಗೆ ಕರಾಟೆ, ಭರತನಾಟ್ಯ, ಭಗವದ್ಗೀತೆ ಶ್ಲೋಕ, ಯೋಗ, ಸ್ವಿಮ್ಮಿಂಗ್, ಸಂಗೀತ, ಡ್ಯಾನ್ಸ್, ಡ್ರಾಯಿಂಗ್ ಸೇರಿದಂತೆ ಇನ್ನು ಮುಂತಾದ ತರಬೇತಿಗಳನ್ನ ಈ ಶಾಲೆಯಲ್ಲಿ ನೀಡಲಾಗುತ್ತದೆ. ಮಕ್ಕಳಿಗೆ ಪ್ರತಿದಿನ ಒಂದೊಂದು ಸ್ಪರ್ಧೆಯನ್ನು ಏರ್ಪಡಿಸುತ್ತಾರೆ , ಮಕ್ಕಳಲ್ಲಿರುವ ಕಲೆಗಳನ್ನು ಹೊರತಂದು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಾರೆ ಎಂದು ಅವರು ಹೇಳಿದರು.
ಮಕ್ಕಳ ಬುದ್ಧಿವಂತಿಕೆ, ಮಕ್ಕಳ ಕ್ರಿಯಾಶೀಲತೆ, ಚುರುಕುತನ ಒಳ್ಳೆಯ ವಾತಾವರಣದಲ್ಲಿ ಮಕ್ಕಳು ಆಟಗಳ ಜೊತೆ ಸಂಸ್ಕಾರವನ್ನ ಕಲಿಯುತ್ತಾರೆ. ಆದ್ದರಿಂದ ಕಡಿಮೆ ವೆಚ್ಚದಲ್ಲಿ ನಿಮ್ಮ ಮಕ್ಕಳಿಗೆ ಉತ್ತಮ ಕಲಿಕೆಗಳನ್ನ ಇಲ್ಲಿ ಕಲಿಸಿಕೊಡಲಾಗುವುದು ವಯೋಮಿತಿ 4 ರಿಂದ 15 ವರ್ಷದ ಒಳಗಿನ ಮಕ್ಕಳಿಗೆ ಏಪ್ರಿಲ್ 5 ರಿಂದ ಮೇ 10ರ ತನಕ ನಮ್ಮ ಕರಾಟೆ ಶಾಲೆಗೆ ಸೇರಿಸಿ ನಿಮ್ಮ ಮಕ್ಕಳ ಉತ್ತಮ ಭವಿಷ್ಯ ರೂಪಿಸಿ ಎಂದು ಅವರು ತಿಳಿಸಿದರು.
ವಿಶೇಷವಾಗಿ ಕರಾಟೆ ಶಾಲೆಯಲ್ಲಿ ಮಕ್ಕಳಿಗಾಗಿ ಇಂದು ನಡೆದ ಸ್ಪರ್ಧೆಯಲ್ಲಿ ಬೆಂಕಿ ಇಲ್ಲದೆ ಅಡುಗೆ ತಯಾರಿಸುವ ಕಾರ್ಯಕ್ರಮ ಕರಾಟೆ ಶಾಲೆಯ ಮಕ್ಕಳು ತಯಾರಿಸಿದ ವಿವಿಧ ಬಗೆಯ ತಿನಿಸುಗಳನ್ನು ಸವಿದು ಶಿಕ್ಷಕರು ಆನಂದಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳು ಮಾಡಿದ ವಿಶೇಷ ತಿಳಿಸುಗಳನ್ನ ಸೇವಿಸಿ ಪೋಷಕರು ಸಂತಸ ವ್ಯಕ್ತಪಡಿಸಿದ್ರು.
ಕಾರ್ಯಕ್ರಮದಲ್ಲಿ ಆಯೋಜಕರಾದ ವಿಜಯಲಕ್ಷ್ಮೀ , ಶಿಕ್ಷಕರಾದ ಆಶಾರಾಣಿ, ರಮಾಮಣಿ, ಆಶಾ, ದೀಪ ಸೇರಿದಂತೆ ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA