ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಮಾಗೋಡು ಗೊಲ್ಲರಹಟ್ಟಿಯಲ್ಲಿರುವ ಶ್ರೀ ಕಂಬದ ರಂಗನಾಥ ಸ್ವಾಮಿ ಹೂವಿನ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಈ ಪುಣ್ಯ ಕ್ಷೇತ್ರಕ್ಕೆ ರಾಜ್ಯದ ಮೂಲೆಮೂಲೆಯಿಂದಲೂ ಭಕ್ತರು ಆಗಮಿಸುತ್ತಾರೆ. ಮಾಗೋಡು ಶ್ರೀ ಕಂಬದ ರಂಗನಾಥ ಸ್ವಾಮಿ ಎಂದರೆ ಹೂವಿಗೆ ಪ್ರಸಿದ್ದಿಯಾಗಿದೆ. ಇಲ್ಲಿ ತಮ್ಮ ಇಷ್ಟಾರ್ಥ ಪ್ರಾಪ್ತಿಯಾದರೆ ಹೂವಿನ ತುಲಾಭಾರ ಸೇರಿದಂತೆ ಸಾವಿರಾರು ರೂ.ಗಳ ಹೂವನ್ನು ತಂದು ಶ್ರೀ ಕಂಬದ ರಂಗನಾಥಸ್ವಾಮಿ ರಥಕ್ಕೆ ಅರ್ಪಿಸುತ್ತಾರೆ.
ರಥೋತ್ಸವದ ವೇಳೆ ರಥದ ತುಂಬೆಲ್ಲಾ ಹೂವಿನಿಂದ ತುಂಬಿರುತ್ತದೆ. ಇಲ್ಲಿ ಶ್ರೀ ರಂಗನಾಥ ಸ್ವಾಮಿಯು ಕಂಬದಲ್ಲಿ ಮೂಡಿರುವ ಕಾರಣಗಳಿಂದ ಕಂಬದರಂಗ ಎಂದು ಕರೆದು ಆರಾಧಿಸುತ್ತಾರೆ. ಇಲ್ಲಿಗೆ ಹೂವೆ ದೇವರಿಗೆ ಪ್ರಿಯವಾದ ವಸ್ತುವಾಗಿದೆ. ಹೂವಿನ ಹಾರವನ್ನು ತೇರಿಗೆ ಹಾಕುವುದು ವಾಡಿಕೆ ಮಾತ್ರವಲ್ಲ. ಭಕ್ತರು ತಮ್ಮ ಇಷ್ಟಾಥಗಳ ಈಡೇರಿಕೆಗೆ ಹರಕೆಯ ರೂಪದಲ್ಲಿ ಹೂವನ್ನು ಅಪಿಸುವುದು ಸಂಪ್ರದಾಯವಾಗಿದೆ. ಕಂಬದ ರೂಪದಲ್ಲಿ ಹೊರಬಂದ ಶ್ರೀಹರಿಯು ವೈಕುಂಠದಿಂದ ಧರೆಗಿಳಿದು ಬಂದು ಭಕ್ತರು ಕಷ್ಟ ಈಡೇರಿಸುತ್ತಾನೆಂದು ಭಕ್ತರು ಭಕ್ತಿಯಿಂದ ಹೂವು ಅರ್ಪಿಸುವುದು ವಾಡಿಕೆಯಾಗಿದೆ.
ಪ್ರತಿ ವರ್ಷ ಮಾಘ ಮಾಸ ತಿಂಗಳಲ್ಲಿ ಬೃಹತ್ ಜಾತ್ರೆ ನಡೆಯುತ್ತದೆ. ಲಕ್ಷಾಂತರ ಭಕ್ತರು ಹೂವಿನ ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ಆಂಧ್ರಪ್ರದೇಶ, ತಮಿಳುನಾಡಿನಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಸೇರುತ್ತಾರೆ. ಜಲಧಿ ಉತ್ಸವ, ಗರುಡ ವಾಹನೋತ್ಸವ, ಹೂವಿನ ರಥೋತ್ಸವ, ಆಂಜನೇಯ ವಾಹನೋತ್ಸವ, ಹೂವಿನ ರಥೋತ್ಸವ, ಆಂಜನೇಯ ವಾಹನೋತ್ಸವ, ತಲೆ ಮಂಡೆ, ಅನ್ನಸಂತರ್ಪಣೆ ನೆರವೇರಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4