ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ವ್ಯವಹಾರ ಪಾರದರ್ಶಕವಾಗಿದ್ದು ಮಾದರಿಯಾಗಿದೆ ಎಂದು ಬಳುವನೆರಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ರಾಂಚ್ ಮ್ಯಾನೇಜರ್ ನಿರಂಜನ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ತಿಪಟೂರು ತಾಲೂಕು, ಸಾರ್ಥವಳ್ಳಿ ವಲಯದ ಬಲುವನೆರಳು ಸಾಮಾನ್ಯ ಗ್ರಾಹಕ ಸೇವಾಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ತಿಪಟೂರು ತಾಲೂಕಿನಲ್ಲಿ ಒಟ್ಟು 3,800 ಸಂಘಗಳಿಗೆ ಎಸ್.ಬಿ.ಐ. ಬ್ಯಾಂಕಿನ ಮೂಲಕ ಆರ್ಥಿಕ ವ್ಯವಹಾರ ನೀಡುತ್ತಿದ್ದು, ಮರುಪಾವತಿ ಉತ್ತಮವಾಗಿದೆ ಎಂದರು.
ಸಂಘದ ಪಾಲುದಾರ ಬಂಧುಗಳಿಗೆ ಸದಸ್ಯರ ಸಮ್ಮುಖದಲ್ಲಿ ಒಪ್ಪಿಗೆ ಪಡೆದು ಸದಸ್ಯರ ಬೆರಳಚ್ಚು ಪಡೆಯುವುದರ ಮೂಲಕ ಸದಸ್ಯರಿಗೆ ನೇರವಾಗಿ ರಾಷ್ಟ್ರೀಕೃತ ಬ್ಯಾಂಕಿನ ಮೂಲಕ ಆರ್ಥಿಕ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ಸಾಮಾನ್ಯ ಗ್ರಾಹಕ ಸೇವಾ ಕೇಂದ್ರದಲ್ಲಿ ಸೌಂದರ್ಯ ತಂಡದ ಸದಸ್ಯರಿಗೆ ಸಾಲ ವಿತರಣೆಯಾದ ಬಗ್ಗೆ ದಾಖಲಾತಿಯನ್ನು ವಿತರಿಸಿದರು.
ಈ ಸಂದರ್ಭ ತಾಲೂಕಿನ ಯೋಜನಾಧಿಕಾರಿಯವರಾದ ಉದಯ್ ಕೆ., ಕಚೇರಿ ಹಣಕಾಸು ಪ್ರಬಂಧಕರಾದ ರೇವಣ್ಣ ಎಂ. ಹಾಗೂ ವಲಯ ಮೇಲ್ವಿಚಾರಕರಾದ ಪ್ರದೀಪ್ ರೈ ರವರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC