ಬೀದರ್: ಜಿಲ್ಲೆಯ ಔರಾದ ತಾಲೂಕಿನ ಸಂತಪೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಚನ ನಿಧಿ ರಕ್ಷಕ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಇದೇ ವೇಳೆ ಡಾ.ರಾಹುಲ್ ಮಾತನಾಡಿ, ಬಸವಾದಿ ಶರಣರ ವಚನಗಳ ಸಂರಕ್ಷಕರಾದ ಶಿವಶರಣ ಮಡಿವಾಳ ಮಾಚಿದೇವರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳು, 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಅಗ್ರನಾಯಕರಾಗಿದ್ದರು. ಶೋಷಿತರ ಹಕ್ಕಿಗಾಗಿ ಶ್ರಮಿಸಿ, ಸಮಾನತೆಯ ಸಂದೇಶ ಸಾರಿದ ಶರಣ ಶ್ರೇಷ್ಠರು. ಅವರ ಕಾಯಕನಿಷ್ಠೆ, ನ್ಯಾಯ ಪ್ರಾಮಾಣಿಕತೆ, ನಿರಹಂಕಾರದಂತಹ ಮೌಲ್ಯಗಳು ಇಂದಿಗೂ ಪ್ರಸ್ತುತ ಎಂದರು.
ಈ ಸಂದರ್ಭದಲ್ಲಿ ಡಾ. ಅಬ್ದುಲ್ ವಾಜಿದ್, ಡಾ. ರಾಹುಲ್, ಜೈಪ್ರಕಾಶ್, ರಾಜಪ್ಪ, ಪಾಂಡು, ರಾಥೋಡ್, ಸುರೇಶ್ ಸೋನೇ, ಕಿರಣ್ ಕುಮಾರ್ ಇದ್ದರು
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4