ಪಾವಗಡ : ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಗುರುಗಳಾದ ೧೦೦೮ನೇ ಪರಮಪೂಜ್ಯ ಶ್ರೀ ಸುವಿದ್ಯೇಂದ್ರತೀರ್ಥರು ಗ್ರಾಮದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀಗುರುಗಳನ್ನು ಭಕ್ತರು ಗ್ರಾಮದ ಹೊರವಲಯದಿಂದಲೇ ಸ್ವಾಗತಿಸಿ ಬೆಳ್ಳಿರಥದಲ್ಲಿ ಶೋಭಯಾತ್ರೆಯ ಮೂಲಕ ಮಠಕ್ಕೆ ಕರೆದೊಯ್ದರು. ರಾಯರ ಮಠದಲ್ಲಿ ಮೂಲರಾಮದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಗುರುಪಾದ ಪೂಜೆ, ಸಂಸ್ಥಾನ ಪೂಜೆ, ಅನುಗ್ರಹ ಸಂದೇಶ ಮಹಾ ಮಂಗಳಾರತಿ ಕಾರ್ಯಗಳು ನೆರವೇರಿದವು. ಭಕ್ತಾಧಿಗಳು ಗುರುಗಳನ್ನು ಮನೆಗಳಿಗೆ ಆಹ್ವಾನಿಸಿ, ತುಲಾಭಾರ, ಪುಷ್ಪಾರ್ಚನೆ ಮತ್ತು ಪಾದಪೂಜೆ ನೆರವೇರಿಸಿದರು. ಮಠದಲ್ಲಿ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿನಿಯೋಗವಾಯಿತು. ಇದೇ ವೇಳೆ ಶ್ರೀಗಳು ಹಲವು ಭಕ್ತರಿಗೆ ಮುದ್ರಾಧಾರಣೆ ಮಾಡಿದರು.
ಈ ಸಂದರ್ಭದಲ್ಲಿ ಮಠದ ಅರ್ಚಕರಾದ ಗುರುರಾಜಾಚಾರ್, ಆನಂದರಾವ್, ಎನ್.ಎಸ್.ಮಂಜುನಾಥ, ಎನ್.ಆರ್.ಅಶ್ವಥ್, ಎನ್.ಸಿ.ಸುಂಬ್ರಮಣ್ಯಂ, ಎನ್.ಎ.ಲಕ್ಷ್ಮಿನಾರಯಣ, ಎನ್.ಎ.ಲಕ್ಷ್ಮಿಶಂಕರ್, ಟಿ.ವಿ.ನಾಗರಾಜು, ಚಂದ್ರಶೇಖರ್ ಮುದ್ರಾಡಿ, ಡಿ.ವಿ.ಅನಿಲ್ ಮುಂತಾದ ಭಕ್ತರು ಇದ್ದರು.
ವರದಿ: ನಂದೀಶ್ ನಾಯ್ಕ