ತುರುವೇಕೆರೆ: ತಾಲೂಕಿನ ಮಾದಪಟ್ಟಣದ ಗ್ರಾಮದೇವತೆ ಶ್ರೀಕೆಂಪಮ್ಮದೇವಿ ಜಾತ್ರಾ ಮಹೋತ್ಸವ ಶುಕ್ರವಾರದಿಂದ ಭಾನುವಾರದವರೆಗೂ ಮೂರು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯಿತು.
ಶುಕ್ರವಾರ ರಾತ್ರಿ ಗ್ರಾಮದೇವತೆ ಶ್ರೀಕೆಂಪಮ್ಮ ದೇವಿಯ ಜೊತೆ ಪುಟ್ಟ ಬಾಲಕಿಯರು ಸೇರಿ ನೂರಾರು ಮಹಿಳೆಯರು ಆರತಿ ಹೊತ್ತು ಸಾಗಿದರು. ಸೋಮನ ಕುಣಿತ, ಡೊಳ್ಳು ಕುಣಿತ, ಚಿಟ್ಟೇ ಮೇಳ ಸೇರಿದಂತೆ ಅನೇಕ ಜನಪದ ಕಲಾಪ್ರಕಾರಗಳೊಂದಿಗೆ ಮದ್ದು ಗುಂಡುಗಳ ಚಮಾತ್ಕಾರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಶನಿವಾರ ಸಂಜೆ ಬಾಯಿ ಬೀಗ ಉತ್ಸವದಲ್ಲಿ ಹರಕೆ ಹೊತ್ತ ಹೆಣ್ಣು ಮಕ್ಕಳು ಬಾಯಿಗೆ ತಂತಿ ಮಾಡಿದ ಸೂಜಿಯನ್ನು ಚುಚ್ಚಿಸಿಕೊಂಡು ಹರಕೆ ತೀರಿಸಿದರು.

ಮೆರವಣಿಗೆಯಲ್ಲಿ ಬಸವನ ಮೇಲೆ ನಗಾರಿವಾದ್ಯ, ದೊಳ್ಳುವಾದ್ಯ ಜಾನಪದ ಕಲಾ ಪ್ರಕಾರದೊಂದಿಗೆ ರಸ್ತೆಯಲ್ಲಿ ಸಾಗಿತು. ಭಾನುವಾರ ಬೆಳಗ್ಗೆ ಕೆಂಪಮ್ಮದೇವಿ ಮತ್ತೆ ಮೂಲ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ಗ್ರಾಮಕ್ಕೆ ಪ್ರವೇಶ ಮಾಡಲಾಗುತ್ತದೆ. ನಂತರ ಭಕ್ತರು ತಮ್ಮ ಹರಕೆ ಹಾಗೂ ಕುರುಹುಗಳನ್ನು ಕೇಳುತ್ತಾರೆ. ದೇವಿಗೆ ಹಲಸಿನ ಹಣ್ಣು, ಬಾಳೆಹಣ್ಣು ಮಾಡಿದ ಪಲಹಾರವನ್ನು ದೇವಿಗೆ, ಸೋಮಗಳಿಗೆ ಮಣೇವು ಹಾಕಿ. ಕತ್ತಿವರಸೆ ನಡೆಸಿ ನಂತರ ಬಂದಂತ ಭಕ್ತಾಧಿಗಳಿಗೆ ವಿತರಿಸಲಾಯಿತು. ಜಾತ್ರಾ ಸಂದರ್ಭದಲ್ಲಿ ದೇವಾಲಯದ ಗುಡಿಗೌಡರು ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರುಗಳು ಭಾಗವಹಿಸಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


