ತುರುವೇಕೆರೆ: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಮಾಯಸಂದ್ರ ಹೋಬಳಿಯ ಗಡಿ ಗ್ರಾಮವಾದ ಡಣ ನಾಯಕನ ಪುರ ಗ್ರಾಮ ಹುಟ್ಟಿನಿಂದ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯವಾದ ಸ್ವಚ್ಚ ಕುಡಿಯುವ ನೀರು, ರಸ್ತೆ, ಆಶ್ರಯ ಮನೆಗಳಿಂದ ವಂಚಿತವಾಗಿರುವ ಬಗ್ಗೆ ಹಾಗೂ ಸರ್ಕಾರಿ ಶಾಲೆಯ ಹೆಚ್ಚುವರಿ ಕಟ್ಟಡ , ಶೌಚಾಲಯಕ್ಕೆ ಗ್ರಾಮಸ್ಥರು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಸಿದ್ದಲಿಂಗೇಗೌಡರಿಗೆ ಮನವಿ ಮಾಡಿದ್ದರು.
ಇದರ ಹಿನ್ನಲೆ ಶ್ರೀಸಿದ್ದಲಿಂಗೇಗೌಡರು ರಾಜ್ಯ ಮಾನವ ಹಕ್ಕುಗಳ ಆಯೋಗದ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಈ ಸಂಬಂಧ ಜಿಲ್ಲಾ ಮಟ್ಟದ ಬರ ನಿರ್ವಹಣಾಧಿಕಾರಿ, ತಾಲ್ಲೂಕಿನ ದಂಡಾಧಿಕಾರಿ, ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳು, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಸಿಬ್ಬಂಧಿ ವರ್ಗ, ಮಾಯಂದ್ರ ಪಂಚಾಯ್ತಿಯ PDO, ಸದಸ್ಯರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಕುಡಿಯುವ ನೀರು ಸರಬರಾಜು ಇಲಾಖೆ, ಹಾಗೂ ಮುಂತಾದ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಗ್ರಾಮದಲ್ಲಿರುವ ನಿವೇಶನ ಮತ್ತು ಮನೆರಹಿತ ಸಂತ್ರಸ್ಥರಿಗೆ ಈಗಾಗಲೇ ಭೂಮಿ ಮಂಜೂರ ಮಾಡಿದ್ದು, ಗುರುತಿಸಿ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದರು.
ಗಣಿ ಮತ್ತು ಭೂ-ವಿಜ್ಞಾನ ಇಲಾಖೆಯಿಂದ ಮಣ್ಣಿನ ರಸ್ತೆ ಆಗುತ್ತಿದ್ದು ಹಾಗೂ ಮುಂದೆ ಪರಿಶಿಷ್ಠ ಜಾತಿ ಮತ್ತು ಪಂಗಡದ ವಿಶೇಷ ಯೋಜನೆಯಡಿಯಲ್ಲಿ ಡಾಂಬಾರೀಕರಣ ಮಾಡುವುದಾಗಿ ತಹಶೀಲ್ದಾರ್ ರವರು ಸಂಬಂಧಿಸಿದವರಿಗೆ ಸೂಚಿಸಿದರು.
ಕೊಳವೆ ಬಾವಿ ಕೊರೆಸಲು ಜಿಲ್ಲಾಡಳಿತಕ್ಕೆ ಈಗಾಗಲೇ ಮನವಿ ಮಾಡಿದ್ದು, ತಾತ್ಕಾಲಿಕವಾಗಿ ಶುದ್ಧ ಕುಡಿಯುವ ನೀರಿಗೆ ಊರಿನ ಖಾಸಗಿ ವ್ಯಕ್ತಿಯ ತೋಟದವರಿಗೆ ಸರ್ಕಾರದಿಂದ ಹಣ ಪಾವತಿಸಿ ಪೈಪ್ ಲೈನ್ ಮಾಡಿ ತುರ್ತು ನೀರು ಕಲ್ಪಿಸಲು ಆದೇಶಿಸಿದರು.
ನಂತರ ಸರ್ಕಾರಿ ಶಾಲೆಗೆ ಬೇಟಿ ನೀಡಿ ಎಸ್.ಡಿ.ಎಂ.ಎಸ್ ಅಧ್ಯಕ್ಷರು, ಸದಸ್ಯರು, ಪೋಷಕರು ಮತ್ತು ಊರಿನ ಮುಖಂಡರೊಂದಿಗೆ ಚರ್ಚಿಸಲಾಯಿತು.
ಈ ವೇಳೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ಶ್ರೀಮಹದೇಶ್ವರ ದೇವಸ್ಥಾನ ಅಭಿವೃದ್ಧಿ ಬಗ್ಗೆ ಚರ್ಚಿಸಿ ದೇವಾಲಯದ ಪಕ್ಕದಲ್ಲಿ ಭಕ್ತರಿಗೆ ಶೌಚಾಲಯ, ಪ್ರತ್ಯೇಕವಾಗಿ ಮಹಿಳೆಯರಿಗೆ ಸ್ನಾನ ಗೃಹಗಳು ಕಲ್ಪಿಸುವುದು ಸರ್ಕಾರದ ವತಿಯಿಂದ ನಾಲ್ಕು ಅಂಗಡಿಗಳನ್ನು ನಿರ್ಮಿಸಿ ಬಹಿರಂಗ ಹಾರಾಜು ಮಾಡಿ ಸಾರ್ವಜನಿಕ ಉಪಯೋಗಕ್ಕೆ ಕಲ್ಪಿಸಲಾಗುವುದು, ಇಲ್ಲಿಯ ಜಮೀನಿನನ್ನು ಸರ್ವೇ ಮಾಡಿಸಿ, ಶಾಲೆಗೆ ಹಸ್ತಾಂತರಿಸಿ ಕಾಂಪೌಂಡು ಅಡಿಗೆ ಕೋಣೆ ಆಟದ ಮೈದಾನ, ಶೌಚಾಲಯ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕುಮಾರಿ ತ್ರಿವೇಣಿ, ಮಾಯಸಂದ್ರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಸುರೇಶ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಇತರೆ ಇಲಾಖೆಯ ಸಿಬ್ಬಂದಿಯವರು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


