ತುಮಕೂರು: ಜಿಲ್ಲೆಯಲ್ಲಿ 2024–25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯು ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆಯಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ವೇಳಾಪಟ್ಟಿ ಪ್ರಕಟವಾಗಿದೆ ಎಂದು ತುಮಕೂರು ತಾಲ್ಲೂಕು ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.
ಪರೀಕ್ಷಾ ವೇಳಾಪಟ್ಟಿ:
ಪ್ರಕಟಿತ ವೇಳಾಪಟ್ಟಿಯನ್ವಯ ಮಾರ್ಚ್ 21ರಂದು ಪ್ರಥಮ ಭಾಷೆಯಾದ ಕನ್ನಡ/ತೆಲುಗು/ಹಿಂದಿ/ಮರಾಠಿ/ತಮಿಳು/ಉರ್ದು/ಇಂಗ್ಲೀಷ್/ಇಂಗ್ಲೀಷ್(NCERT)/ ಸಂಸ್ಕೃತ; ಮಾ.24 ರಂದು ಗಣಿತ, ಸಮಾಜ ಶಾಸ್ತ್ರ; ಮಾ.26ರಂದು ದ್ವಿತೀಯ ಭಾಷೆ ಇಂಗ್ಲೀಷ್/ ಕನ್ನಡ; ಮಾ.29ರಂದು ಸಮಾಜ ವಿಜ್ಞಾನ; ಏಪ್ರಿಲ್ 1ರಂದು ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್- IV / ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್– IV / ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್- IV / ಪ್ರೋಗ್ರಾಮಿಂಗ್ ಇನ್ ANSI ‘ಅ’ ಹಾಗೂ ಅರ್ಥಶಾಸ್ತ್ರ; ಏಪ್ರಿಲ್ 2ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ; ಏಪ್ರಿಲ್ 4ರಂದು ತೃತೀಯ ಭಾಷೆಯಾದ ಹಿಂದಿ(NCERT), ಹಿಂದಿ/ಕನ್ನಡ/ ಇಂಗ್ಲೀಷ್/ ಅರೇಬಿಕ್/ ಪರ್ಷಿಯನ್/ ಉರ್ದು/ ಸಂಸ್ಕೃತ/ ಕೊಂಕಣಿ/ತುಳು ಹಾಗೂ NSQ ಈ ವಿಷಯಗಳಾದ ಮಾಹಿತಿ ತಂತ್ರಜ್ಞಾನ/ ರೀಟೇಲ್/ಆಟೋಮೊಬೈಲ್/ಬ್ಯೂಟಿ ಅಂಡ್ ವೆಲ್ ನೆಸ್/ಅಪರೆಲ್ ಮೇಡ್ ಅಪ್ಸ್ ಮತ್ತು ಹೋಂ ಫರ್ನಿಷಿಂಗ್/ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ವೇರ್ ವಿಷಯಗಳ ಪರೀಕ್ಷೆ ನಡೆಯಲಿದೆ.
ತುಮಕೂರು ತಾಲ್ಲೂಕಿನ ಪರೀಕ್ಷಾ ಕೇಂದ್ರಗಳ ವಿವರ :-
ತುಮಕೂರು ತಾಲ್ಲೂಕಿನ ಒಟ್ಟು 29 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ವಿವರ ಇಂತಿದೆ. ನಾಗವಲ್ಲಿ ಹಾಗೂ ಬೆಳ್ಳಾವಿಯ ಕೆ.ಪಿ.ಎಸ್. ಶಾಲೆ; ಹೆಬ್ಬೂರಿನ ಗಣಪತಿ ಪ್ರೌಢಶಾಲೆ; ಗೂಳೂರು ಶ್ರೀ ಗಣೇಶ ಗ್ರಾಮಾಂತರ ಪದವಿ ಪೂರ್ವ ಕಾಲೇಜು; ಹೊನ್ನುಡಿಕೆ ಸ್ವರ್ಣಾಂಬ ಪ್ರೌಢಶಾಲೆ; ತುಮಕೂರು ಬಟವಾಡಿಯ ಚೇತನ ವಿದ್ಯಾ ಮಂದಿರ; ದೇವರಾಯ ಪಟ್ಟಣದ ವಿದ್ಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆ; ಊರ್ಡಿಗೆರೆ ಸೆಂಟ್ರಲ್ ಸಂಯುಕ್ತ ಪದವಿ ಪೂರ್ವ ಕಾಲೇಜು; ತುಮಕೂರು ಶಿರಾಗೇಟ್ ನ ಕಾಳಿದಾಸ ಪದವಿ ಪೂರ್ವ ಕಾಲೇಜು ಹಾಗೂ ಅನಿಕೇತನ ಪ್ರೌಢಶಾಲೆ; ಸಿ.ಟಿ.ಕೆರೆಯ ಅಟವಿ ಸಿದ್ದಲಿಂಗೇಶ್ವರ ಪದವಿ ಪೂರ್ವ ಕಾಲೇಜು; ಬೆಳಧರದ ಶ್ರೀ ಬೆಳಧರ ಗ್ರಾಮಾಂತರ ಪ್ರೌಢಶಾಲೆ; ತುಮಕೂರಿನ ಜೆ.ಸಿ.ರಸ್ತೆಯಲ್ಲಿರುವ ಆರ್ಯನ್ ಪ್ರೌಢಶಾಲೆ; ಸಿದ್ದಾರ್ಥನಗರದ ಶ್ರೀ ಸಿದ್ಧಾರ್ಥ ಗ್ರಾಮಾಂತರ ಪ್ರೌಢಶಾಲೆ; ಗಾಂಧಿನಗರದ ಸೆಂಟ್ ಮೇರೀಸ್ ಬಾಲಕಿಯರ ಪ್ರೌಢಶಾಲೆ; ಊರುಕೆರೆಯ ಸರ್ಕಾರಿ ಪ್ರೌಢಶಾಲೆ; ಕೋರಾ ಮಹಾಲಿಂಗೇಶ್ವರ ಪ್ರೌಢಶಾಲೆ; ಕ್ಯಾತ್ಸಂದ್ರದ ಸರ್ಕಾರಿ ಪ್ರೌಢಶಾಲೆ; ಎಸ್.ಎಸ್.ಮಠದ ಸಿದ್ಧಲಿಂಗೇಶ್ವರ ಸನಿವಾಸ ಉನ್ನತ ಪ್ರೌಢಶಾಲೆ(ಕೇಂದ್ರ–1 ಮತ್ತು 2) ಹಾಗೂ ವಸ್ತು ಪ್ರದರ್ಶನ ಆವರಣ ಶ್ರೀ ಸಿದ್ಧಗಂಗಾ ಆಂಗ್ಲ ಮಾಧ್ಯಮ ಪ್ರೌಢಶಾಲೆ; ವೀರಸಾಗರದ ಶ್ರೀ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜು; ತುಮಕೂರು ವಿಜಯನಗರದ ಸೋಮೇಶ್ವರ ಬಾಲಕಿಯರ ಪ್ರೌಢಶಾಲೆ; ತುಮಕೂರು ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸಿದ್ದಗಂಗಾ ಪದವಿ ಪೂರ್ವ ಕಾಲೇಜು.; ತುಮಕೂರು ಸದಾಶಿವನಗರ ಕನ್ನಿಕಾ ಪ್ರೌಢಶಾಲೆ; ಹೊರಪೇಟೆ ಬಾಪೂಜಿ ಪದವಿಪೂರ್ವ ಕಾಲೇಜು ಹಾಗೂ ಚೇತನ ವಿದ್ಯಾಮಂದಿರ; ತುಮಕೂರು ಕೆ.ಪಿ.ಎಸ್.ಎಂಪ್ರೆಸ್ ಶಾಲೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4