ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 625 ಅಂಕಗಳಿಗೆ 600ಕ್ಕೂ ಹೆಚ್ಚು ಅಂಕ ಪಡೆದು 98 ಪರ್ಸೆಂಟ್ ತೆಗೆದಿದ್ದಾರೆ. ತಮ್ಮ ಮಕ್ಕಳ ಫಲಿತಾಂಶವನ್ನು ಕಂಡು ಪೋಷಕರಲ್ಲಿ ಸಂಭ್ರಮ ಮನೆ ಮಾಡಿದೆ.
ಕೊರಟಗೆರೆ ಪಟ್ಟಣದ ಚಾಣಕ್ಯ ಶಾಲೆಯಲ್ಲಿ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದು ಕೊರಟಗೆರೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಭವಿಷ್ಯದಲ್ಲಿ ಏನು ಕನಸು ಕಂಡಿದ್ದರು ಅಂತಹ ವಿದ್ಯಾಭ್ಯಾಸವನ್ನು ಕಷ್ಟಪಟ್ಟಾದರೂ ಕೊಡಿಸುತ್ತೇವೆ ಎಂದಿದ್ದಾರೆ ಪೋಷಕರು.
ಮಕ್ಕಳಿಗೆ ಫೋನ್ ಗಳನ್ನು ಕೊಡುವುದನ್ನು ನಿಲ್ಲಿಸಬೇಕು. ಅವರು ಶಾಲೆಯಲ್ಲಿ ಏನು ಮಾಡುತ್ತಿದ್ದಾರೆ ಮನೆಗೆ ಬಂದಾಗ ಓದುತ್ತಾರೋ ಇಲ್ಲವೋ ಎಂದು ಗಮನಿಸಬೇಕು. ಮಕ್ಕಳ ಭವಿಷ್ಯದ ಕಡೆ ಗಮನ ಕೊಡಬೇಕು ಎಂದು ಪೋಷಕರು ತಿಳಿಸಿದ್ದಾರೆ.
ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ತುಂಬಾ ಕಷ್ಟಪಟ್ಟು ಓದಿದ್ದೇವೆ. ಆದ್ದರಿಂದ ಉತ್ತಮ ಫಲಿತಾಂಶ ಬಂದಿದೆ ಎಂದಿದ್ದಾರೆ ವಿದ್ಯಾರ್ಥಿಗಳು.
ಕಾರ್ಯನಿರತ ಪತ್ರಕರ್ತ ಸಂಘದ ತಾಲ್ಲೂಕು ಅಧ್ಯಕ್ಷರಾದ ಪುರುಷೋತ್ತಮರವರ ಮಗ ಪ್ರೀಯತೋಷ್ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಸಣ್ಣ ಹೋಟೆಲ್ ಉದ್ಯಮಿ ವೆಂಕಟೇಶ್ ಮಗಳು ಭೂಮಿಕ ತಾಲೂಕಿಗೆ ಟಾಪರ್ ಆಗಿದ್ದಾರೆ. ಮನೆ ಮನೆಗೆ ಬೆಳಿಗ್ಗೆ ಪೇಪರ್ ಹಾಕುವ ಪಂಕಜ್ ಎನ್ನುವ ವಿದ್ಯಾರ್ಥಿ 625 ಅಂಕಕ್ಕೆ 564 ಅಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296