ಜೆಡಿಎಸ್ ಶಾಸಕರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ಮಂಜೂರಾಗಿದ್ದ ಮನೆಗಳನ್ನು ಶಿಫ್ಟ್ ಮಾಡಿದ್ದು ಕಾಂಗ್ರೆಸ್ ಕ್ಷೇತ್ರದ ಶಾಸಕರಿಗೆ ಮನೆ ಮಂಜೂರು ಮಾಡಿದೆ.
ತುರುವೇಕೆರೆಗೆ ಮಂಜೂರು ಆಗಿದ್ದ 3,375 ಮನೆಗಳನ್ನು ಕುಣಿಗಲ್ಗೆ ಶಿಫ್ಟ್ ಮಾಡಿದೆ. ಈ ಹಿನ್ನೆಲೆ ವಸತಿ ಇಲಾಖೆ ಸಚಿವ ಜಮೀರ್ ವಿರುದ್ಧ ಶಾಸಕ ಎಂ.ಟಿ.ಕೃಷ್ಣಪ್ಪ ಆಕ್ರೋಶ ಹೊರ ಹಾಕಿದ್ದಾರೆ.


