ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಡೆದಾಡುವ ದೇವರ ಹೆಸರನ್ನು ತುಮಕೂರು ರೈಲ್ವೆ ನಿಲ್ದಾಣಕ್ಕೆ ಇರಿಸುವ ಬಗ್ಗೆ ಸಮ್ಮತಿಸಲು ರಾಜ್ಯ ಸರಕಾರ ಪರೋಕ್ಷವಾಗಿ ಹಿಂದೇಟು ಹಾಕುತ್ತಿದೆ. ನಾಲ್ಕು ಬಾರಿ ರಾಜ್ಯ ಸರಕಾರಕ್ಕೆ ಪತ್ರ ಬರೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ್ದೆ ರೀತಿಯಲ್ಲೂ ಸ್ಪಂದಿಸುತ್ತಿಲ್ಲ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಶೆಟ್ಟಿಹಳ್ಳಿ ಗೇಟ್ ಬದಲಿಗೆ ಪಾದಚಾರಿ ಸಬ್ ವೇ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ಕುರಿತು ಚಚಿಸಲು ನಾನೇ ಸ್ವತಃ ಮುಖ್ಯಮಂತ್ರಿ ಬಳಿ ಹೋಗಿದ್ದೇನೆ. 90 ಕೋ . ರೂ. ಟೆಂಡರ್ ಆಗಿದೆ. ಐದು ಆರು ತಿಂಗಳಿನಿಂದ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಂಬಂಧ ಪಟ್ಟ ಮುಖ್ಯ ಕಾರ್ಯದರ್ಶಿ ಬಳಿಯೂ ಮಾತನಾಡಿದ್ದೇನೆ. ಹಣಕಾಸು ಕಾಯದರ್ಶಿಗೂ ಮಾತನಾಡಿದ್ದೇನೆ. ರಾಜ್ಯ ಮತ್ತು ಕೇಂದ್ರ ಸರಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. 9 ತಿಂಗಳಿನಿಂದಲೂ ನಾನು ಯಾವ್ದೆ ರಾಜ್ಯ ಸರಕಾರದ ಕಾರ್ಯಕ್ರಮಗಳಿಗೆ ಹೋಗಿಲ್ಲ, ಬೇಕಿಲ್ಲ ಮಾಡಿಕೊಳ್ಳಿ ಎಂದಿದ್ದೇನೆ ಎಂದರು.
ಪ್ರಧಾನಿ ಮೋದಿ ಅವರು ನಾರ್ಥ್ ಈಸ್ಟ್ ಏಳು ರಾಜ್ಯಗಳಿಗೆ ಪ್ರತಿನಿಧಿಯಾಗಿ ನೇಮಕ ಮಾಡಿದ್ದಾರೆ. ಐದು ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಅಸ್ಸಾಂ, ಅರುಣಾಚಲ ಪ್ರದೇಶ, ಚತ್ತೀಸ್ ಘಡ, ಮೇಘಾಲಯ, ಹಿಮಾಚಲ ಪ್ರಧೇಶದಲ್ಲಿ ಮಾತನಾಡುತ್ತಿದ್ದೇನೆ. ರಾಜ್ಯ ಸರಕಾರವು ಇತಿ ಮಿತಿಯಲ್ಲಿ ಮಾಡಬೇಕಿದೆ. ಅಧೀಕಾರಿಗಳಿಂದ ದಾರಿತಪ್ಪಬೇಡಿ ಎಂದರು.
ರೈಲನ್ನು ಯಾವ ಟ್ರಾಕ್ ನಲ್ಲಿ ಯಾವ ಟ್ರಾಕ್ ನಲ್ಲಿ ಓಡಿಸಿದರೆ ಏನು ಆಗಲಿದೆ ಎಂಬುದನ್ನು ತಿಳಿದಿದ್ದೇನೆ, 45 ವಷಗಳ ರಾಜಕೀಯ ಅನುಭವವಿದೆ ನನಗೆ, ರೈಲ್ವೆ ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಭೂಸ್ವಾಧೀನ ಮತ್ತು ಅನುಷ್ಠಾನದ ಬಗ್ಗೆ ಪ್ರಧಾನಿ ಮೋದಿ ಮತ್ತು ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಅನುಷ್ಟಾನಗೊಳ್ಳಲಿದೆ. ಬೆಂಗಳೂರಿನಲ್ಲಿದ್ದ ಭೂಸ್ವಾಧೀನ ಅಧಿಕಾರಿಯನ್ನು ತುಮಕೂರಿಗೆ ವಗಾವಣೆ ಮಾಡಿಸಿದ್ದೇನೆ ಎಂದರು.
ಕೇಂದ್ರ ಸರಕಾರ ಕುಡಿಯುವ ನೀರು ಯೋಜನೆ ಅನುಷ್ಟಾನಕ್ಕೆ 2028 ರವರೆಗೆ ವಿಸ್ತರಿಸಿ 4 ಲಕ್ಷ ರೂ. ಕೋಟಿ ಹಣವನ್ನು ಬಿಡುಗಡೆ ಮಾಡಲಿದೆ. ಮಾಜಿ ಸಂಸದ ಬಸವರಾಜ್ ಅವರನ್ನು ಕರೆದು ನನ್ನ ಕೆಲಸದಲ್ಲಿ ಜೊತೆಯಲ್ಲಿರಿ ಎಂದಿದ್ದೇನೆ. ನಾನು ಇರುವರೆಗೂ ನನ್ನ ಜೊತೆಯಲ್ಲಿರಿ ನಿಮ್ಮ ಮಾರ್ಗದರ್ಶನ ಪಡೆಯುತ್ತೇನೆ. ಆದ್ರೆ ನೀವು ಹೇಳಿದ್ದನ್ನು ಶೇ.100 ರಷ್ಟು ನಾನು ಕೇಳುವವನಲ್ಲ, ನಾನು ಕೂಡ ಚಾಂಡಾಲ. ನನ್ನದೇ ಆದ ದೂರದೃಷ್ಟಿಯಿದೆ. 45 ವಷದ ಅನುಭವವಿದೆ ಅದನ್ನು ಹಂಚಿಕೊಳ್ಳುವೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4