ಮಧುಗಿರಿ: ವಿದ್ಯಾರ್ಥಿಗಳು ತಮ್ಮ ಕಲೆಯಲ್ಲಿ ನೈಪುಣ್ಯತೆ ಬೆಳಸಿಕೊಂಡು ಜಿಲ್ಲಾ ಮಟ್ಟದಲ್ಲಿ ತಮ್ಮ ಪ್ರತಿಭೆ ತೋರಿಸಿ ತಮ್ಮ ಶಾಲೆಗೆ ಕೀರ್ತಿ ತರಬೇಕೆಂದು ನೇರಳೇಕೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ R. ರಜನಿ. ಕರೆ ನೀಡಿದರು.
ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿ ಶಿಕ್ಷಣ ಇಲಾಖೆಯ ಹೊಸಕೆರೆ ಕ್ಲಸ್ಟರ್ ವತಿಯಿಂದ ನೇರಳೇಕೆರೆ ಹಿರಿಯ ಪ್ರಾಥಮಿಕ ಪಾಠಶಾಲೆಯ ಅವರಣದಲ್ಲಿ ಆಯೋಜಿದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಣ ಇಲಾಖೆ ಪ್ರತಿನಿಧಿ ಮಹಾದೇವಯ್ಯ ಮಾತನಾಡಿ, ಪ್ರತಿಭಾ ಕಾರಂಜಿ ತೀರ್ಪುಗಾರರು ಮಕ್ಕಳ ಕಲೆಯನ್ನು ಪ್ರಾಮಾಣಿಕ ಗುರುತಿಸಿ ಮಕ್ಕಳು ಜಿಲ್ಲಾ ಮಟ್ಟಕ್ಕೆ ಹೋಗುವಂತ ಕೆಲಸ ಆಗಬೇಕೆಂದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಲಕ್ಷ್ಮೀ ಪ್ರಸಾದ್ ಮಾತನಾಡಿ, ತೀರ್ಪುಗಾರರು ಕಾರ್ಯಕ್ರಮದಲ್ಲಿ ಯಾವುದೇ ಲೋಪ ಇಲ್ಲದಂತೆ ಪ್ರತಿಭೆಗಳನ್ನು ಗುರುತಿಸಬೇಕೆಂದು ತಿಳಿಸಿದರು.
ಬರಹಗಾರರಾದ ಎಸ್.ಎಸ್.ಈಶ್ವರಪ್ರಸಾದ್ ಮಾತನಾಡಿ, ಶಾಲೆಗಳಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳಲ್ಲಿ ಸಹ ಪ್ರತಿಭಾ ಕಾರಂಜಿಯಲ್ಲಿರುವ ಕಲೆಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸ ಬೇಕೆ ಹೊರತು, ಸಿನಿಮಾ ಸಾಂಗ್ ಗಳನ್ನು ಬೆಳಸುವುದು ಬೇಡ. ಮಕ್ಕಳಲ್ಲಿ ಒಳ್ಳೆಯ ಅಭಿರುಚಿ ಬೆಳೆಸಬೇಕೆಂದರು ಹಾಗೂ ಗ್ರಾಮ ಪಂಚಾಯತಿಯವರು ಈ ಶಾಲೆಗೆ ಕಾರ್ಯಕ್ರಮಗಳನ್ನು ನಡೆಸಲು ವೇದಿಕೆ ನಿರ್ಮಾಣ ಮಾಡಬೇಕೆಂದರು.
ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ನಾಜೀಮ ಭಾನು ವಹಿಸಿದರು. ಈ ಕಾರ್ಯಕ್ರಮದಲ್ಲಿ ನೇರಳೇಕೆರೆ ಗ್ರಾಮ ಪಂಜಾಯತಿಯ ಕಾರ್ಯದರ್ಶಿ ಗೋವಿಂದರಾಜು, ನೇರಳೇಕೆರೆ ಶಾಲೆಯ ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ್, ಗ್ರಾಮ ಪಂಚಾಯತಿ ಸದಸ್ಯ ಉಮಾದೇವಿ, ಶಿಕ್ಷಣ ಇಲಾಖೆಯ ಬಿ.ಆರ್.ಸಿ.ಗಳು ಸಿ.ಆರ್.ಪಿ ಗಳು ಶಿಕ್ಷಕರಾದ ಏಜಾಜ ಪಾಶ ಹಾಗೂ ಇತರೆ ಶಿಕ್ಷಕರು ಉಪಸ್ಥಿತರಿದ್ದರು. ತಿಪ್ಪೆಸ್ವಾಮಿ ಸ್ವಾಗತಿಸಿದರು. ಶಿಕ್ಷಕರಾದ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಹೊಸಕೆರೆ ಶಿಕ್ಷಕಿಯಾದ ರೂಪ ರಾಣಿ ವಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q