ಚಿತ್ರದುರ್ಗ: ನೇತಾಜಿ ಸುಭಾಸ್ ಚಂದ್ರ ಬೋಸ್ ರವರ 126 ನೇ ಜನ್ಮದಿನಾಚರಣೆಯನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ನೇತಾಜಿ ಸುಭಾಸ್ ಚಂದ್ರ ಬೋಸ್ ಯುವಕರ ಸಂಘದ ವತಿಯಿಂದ ಆಚರಿಸಲಾಯಿತು.
ಸಂಘದ ಅಧ್ಯಕ್ಷರಾದ ಟೈಲರ್ ಮಂಜುನಾಥ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಟೈಲರ್ ಮಂಜುನಾಥ್ ಅವರು ನೇತಾಜಿ ಸುಭಾಸ್ ಚಂದ್ರಬೋಸ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಪ್ರತೀ ವರ್ಷವೂ ಸುಭಾಸ್ ಚಂದ್ರಬೋಸ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ, ಸುಭಾಸ್ ಚಂದ್ರ ಭೋಸ್ ಅವರ ಕುರಿತು ವಿಶೇಷ ಅಭಿಮಾನ ಮೆರೆಯುತ್ತಾರೆ. ವೃತ್ತಿಯಲ್ಲಿ ಟೈಲರ್ ಆಗಿರುವ ಮಂಜುನಾಥ್ ಅವರು ನೇತಾಜಿ ಸುಭಾಸ್ ಚಂದ್ರ ಬೋಸ್ ಜಯಂತಿಯನ್ನು 22 ವರ್ಷಗಳಿಂದಲೂ ಆಯೋಜಿಸುತ್ತಿದ್ದಾರೆ.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಂಜುನಾಥ್ ಅವರು, ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ತ್ಯಾಗ, ಬಲಿದಾನ ಅವರು ಕಟ್ಟಿರುವಂತಹ ಇಂಡಿಯನ್ ಆರ್ಮಿ, ಅವರು ಭಾರತ ದೇಶಕ್ಕೆ ನೀಡಿರುವಂತಹ ಕೊಡುಗೆಗಳು ಅಮೂಲ್ಯವಾದದ್ದು , ಶ್ರೇಷ್ಠವಾದದು, ಅವರನ್ನು ಯಾರೂ ಸಹ ಮರೆಯಲು ಸಾಧ್ಯವಿಲ್ಲ ಎಂದರು. ನಂತರ, ಸುಭಾಸ್ ಚಂದ್ರ ಬೋಸ್ ಅವರ ಉಡುಪಿನೊಂದಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಸುಭಾಸ್ ಚಂದ್ರ ಬೋಸ್ ಅವರ ಭಾವಚಿತ್ರದೊಂದಿಗೆ ತಾಲ್ಲೂಕಿನಾದ್ಯಾಂತ ಮೆರವಣಿಗೆ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೋಪಿಯಾದವ್ ಮಾತನಾಡಿ, ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರಯವನ್ನು ಕೊಡಿಸುತ್ತೇನೆ ಎಂದು ಶೌರ್ಯದಿಂದ ಹೇಳಿದಂತಹ ಕ್ರಾಂತಿಯ ಕಿಡಿ, ಅಪ್ರತಿಮ ದೇಶಭಕ್ತ ,ನೇತಾಜಿ ಸುಭಾಸ್ ಚಂದ್ರ ಭೋಸ್ ಅವರು 1897 ರ ಜನವರಿ 23 ರಂದು ಒಡಿಶಾದ ಕಟಕ್ ನಲ್ಲಿ ಜನಿಸಿದರು. ತಂದೆ ಜಾನಕಿನಾಥ್ , ತಾಯಿ ಪ್ರಭಾವತಿ. ಬೋಸ್ ಅವರ ತಂದೆ, ತಾಯಿಗೆ ಹದಿನಾಲ್ಕು ಜನ ಮಕ್ಕಳೂ. ಈ ಪೈಕಿ ನೇತಾಜಿ ಸುಭಾಸ್ ಚಂದ್ರ ಬೋಸ್ ರವರು 9 ನೇಯವರಾಗಿದ್ದಾರೆ. ಇಂತಹ ನೇತಾಜಿ ಸುಭಾಸ್ ಚಂದ್ರ ಬೋಸ್ ಜನ್ಮ ದಿನಾಚರಣೆಯನ್ನು ಟೈಲರ್ ಮಂಜುನಾಥ್ ರವರು ಸತತ 22 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಇದು ಶ್ಲಾಘನೀಯ ಎಂದು ಅವರು ಹೇಳಿದರು.
ಸುಭಾಸ್ ಚಂದ್ರ ಬೋಸ್ ರವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಹೋರಾಟಕ್ಕೆ ಇಳಿದಂತಹ ಮಹಾನ್ ವ್ಯಕ್ತಿ , ಜೀವನದಲ್ಲಿ ಏನೇ ಸಾಧನೆ ಮಾಡಿದರೂ ಸಮೇತ ಕಿರಿ ವಯಸ್ಸಿನಲ್ಲಿಯೇ ಶುರು ಮಾಡಿದರೆ. ಕನಿಷ್ಠ 30 ವರ್ಷದೊಳಗೆ ಸಾಧನೆ ಮಾಡಬಹುದು ಎಂಬುದಾಗಿ ಯುವ ಪೀಳಿಗೆಗಳಿಗೆ ತಿಳಿಸಿ ಹೇಳಿದರು . ಆ ಸಾಧನೆಯಿಂದಲೇ ಇಂದು ನೇತಾಜಿ ಸುಭಾಸ್ ಚಂದ್ರ ಬೋಸ್ ರವರು ದೇಶ ಕಟ್ಟುವಂತಹ ಸಾಧನೆ ಮಾಡಿದಾಗಿಯೂ ಸಹ ಗೋಪಿಯಾದವ್ ತಿಳಿಸಿದರು .
ಈ ಸಂದರ್ಭದಲ್ಲಿ ನೇತಾಜಿ ಸುಭಾಸ್ ಚಂದ್ರಬೋಸ್ ಸಂಘದ ಅಧ್ಯಕ್ಷರಾದಂತಹ ನೇತಾಜಿ ಟೈಲರ್ ಮಂಜುನಾಥ್ ಮತ್ತು ಕುಟುಂಬಸ್ಥರು , ಹಾಗೂ ನಿವೃತ್ತಿ ಹೊಂದಿದ್ದಂತಹ ಮಾಜಿ ಸೈನಿಕರಾದಂತಹ ಮಂಜುನಾಥ್ , ಸುಬ್ರಮಣಿ, ಬಿ.ಎಸ್.ಎಫ್ ಪುರುಷೋತ್ತಮ್ , ಶಿಕ್ಷಕ ವರ್ಗದವರಾದ ತಿಮ್ಮಣ್ಣ , ದಶನಾಥ್ , ವಕೀಲರು ಚಂದನ್ , ಸತೀಶ್ , ಎಸ್ ಕೆ ಪಿ ಪ್ರೆಸಿಡೆಂಟ್ ಈ ಆರ್ ರಮೇಶ್ ಬಾಬು, ಮಾಜಿ ಪುರಸಭೆ ಸದಸ್ಯರಾದ ದಿವಾಕರ ನಾಯಕ , ಶೇಖರ್, ನಗರಸಭೆ ಸದಸ್ಯರಾದ ಸುರೇಖಾಮಣಿ , ಗಣೇಶ್ , ಇನ್ನು ಇತರರು ಉಪಸ್ಥಿತರಿದ್ದರು .
ವರದಿ: ಮುರುಳಿಧರನ್ ಆರ್. ಹಿರಿಯೂರು ( ಚಿತ್ರದುರ್ಗ )