ಕೇಂದ್ರ ಸರ್ಕಾರವೇ ಬಂದು ನಿಂತರೂ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ಗೆಲ್ಲೋಕೆ ಬಿಡಲ್ಲ. ಸುಧಾಕರ್ ಸಂಸತ್ ಮೆಟ್ಟಿಲು ಹತ್ತೋಕೆ ಬಿಡಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಸುಧಾಕರ್ ರನ್ನು ಪಾರ್ಲಿಮೆಂಟ್ ಗೆ ಹೋಗೋಕೆ ಬಿಡಲ್ಲ. ಕೋವಿಡ್ ಸಮಯದಲ್ಲಿ 2200 ಕೋಟಿ ರೂ. ಅಕ್ರಮ ಆರೋಪವಿದೆ. ಯತ್ನಾಳ್ ಅವರೇ 40 ಸಾವಿರ ಅಕ್ರಮ ಎಂದಿದ್ದಾರೆ. 1 ಮಾಸ್ಕ್ ಗೆ 450 ರೂ ಕೊಟ್ಟು ಹಗರಣ ಮಾಡಿದ್ದಾರೆ. ಸುಧಾಕರ್ ಗೆ ಮತ ಹಾಕಿದ್ರೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.
ಇವರಿಗೆ ಬಿಜೆಪಿಯಿಂದ ಹೇಗೆ ಟಿಕೆಟ್ ಸಿಕ್ಕಿತ್ತು..? ಕೆಲ ಬಿಜೆಪಿ ನಾಯಕರು ಇವರಿಗೆ ಸಹಾಯ ಮಾಡಿದ್ದಾರೆ. ನಾನು ಹಗರಣ ಮಾಡಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ಪ್ರಮಾಣ ಮಾಡಲು ಸುಧಾಕರ್ ರೆಡಿ ಇದ್ದಾರಾ ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


