ಮೈಸೂರು: 600 ಕೆ.ಜಿ ತೂಕದ ಮರದ ಅಂಬಾರಿಯನ್ನು ಸುಗ್ರೀವಾ ಆನೆ ಅರಮನೆಯಿಂದ ಬನ್ನಿಮಂಟಪದವರೆಗೆ ಸರಾಗವಾಗಿ ಹೊತ್ತು ಸಾಗಿದ್ದಾನೆ.
ಶುಕ್ರವಾರ ನಡೆದ ದಸರಾಗೆ ಜಂಬೂಸವಾರಿ ತಾಲೀಮು ವೇಳೆ ಸುಗ್ರೀವಾ ಆನೆ 600 ಕೆ.ಜಿ. ತೂಕದ ಮರದ ಅಂಬಾರಿ ಹೊರುವ ಮೂಲಕ ಚಿನ್ನದ ಅಂಬಾರಿ ಹೊರಲು ತಾನೂ ಅರ್ಹ ಅಂತ ನಿರೂಪಿಸಿದ್ದಾನೆ.
ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಮೂರನೇ ಬಾರಿ ಆಗಮಿಸಿರುವ 43 ವರ್ಷದ ಸುಗ್ರೀವನಿಗೆ 280 ಕೆ.ಜಿ ಮರದ ಅಂಬಾರಿ ಸೇರಿ ಒಟ್ಟು ಸುಮಾರು 600 ಕೆ.ಜಿ ಭಾರ ಹೊರಿಸಿ ಶುಕ್ರವಾರ ತಾಲೀಮು ನಡೆಸಲಾಯಿತು.
ಮೊದಲ ಬಾರಿಗೆ ಇಷ್ಟು ಭಾರವನ್ನು ಬೆನ್ನಿಗೇರಿಸಿದರೂ ಕೊಂಚವೂ ವಿಚಲಿತಗೊಳ್ಳದೆ ಅನುಭವಿಯಂತೆ ಸುಗ್ರೀವಾ ತಾಲೀಮು ಪೂರ್ಣಗೊಳಿಸಿ, ಭರವಸೆ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC