ತುಮಕೂರು: ಎಂಎಲ್ ಸಿ ರಾಜೇಂದ್ರ ಹತ್ಯೆಗೆ ಸುಫಾರಿ ಪ್ರಕರಣಕ್ಕೆ ಸಂಬಂದಿಸಿದಂತೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲು ಆಗಿದೆ.
ಎಂಎಲ್ ಸಿ ರಾಜೇಂದ್ರ ದೂರಿನ ಆಧಾರದ ಮೇಲೆ ಎಫ್.ಐಆರ್ ದಾಖಲು ಆಗಿದ್ದು, ಐದು ಜನರ ವಿರುದ್ಧ ಎಫ್.ಐ.ಆರ್ ನಲ್ಲಿ ಹೆಸರು ಉಲ್ಲೇಖಿಸಲಾಗಿದೆ.
A1 ಸೋಮ ಅಲಿಯಾಸ್ ಜಯಪುರ ಸೋಮ
A2 ಭರತ್
A3 ಅಮಿತ್
A4 ಗುಂಡಾ
A5 ಯತೀಶ್ ಎಂಬುವರ ಮೇಲೆ ದೂರು.
ಬಿಎನ್ ಎಸ್ ಕಲಂ 109,329(4),61(2) ಹಾಗೂ 190 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಆಗಿದೆ.
ದೂರಿನ ವಿವರ:
ಬೆಂಗಳೂರು ಮೂಲದ ಪ್ರಬಲ ವ್ಯಕ್ತಿಗಳಿಂದ ಕೊಲೆ ಪಿತೂರಿ ನಡೆದಿದೆ. ರಾಜೇಂದ್ರ ಕೊಲೆಗೆ ಸಂಚು ರೂಪಿಸಿದ ಬೆಂಗಳೂರು ಮೂಲದ ಅನಾಮಧೇಯ ವ್ಯಕ್ತಿಗಳು, 70 ಲಕ್ಷ ರೂಪಾಯಿಗೆ ಸುಪಾರಿ ಅಂತಿಮಗೊಳಿಸಿ, 5 ಲಕ್ಷ ರೂಪಾಯಿ ಅಡ್ವಾನ್ ನೀಡಲಾಗಿತ್ತು.
ಸುಫಾರಿ ತೆಗೆದುಕೊಂಡಿದ್ದ ಸೋಮ ಅಲಿಯಾಸ್ ಜಯಪುರ ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಇಬ್ಬರು ವ್ಯಕ್ತಿಗಳು ನಡೆಸಿದ ಸಂಭಾಷಣೆಯ ಆಡಿಯೋದಲ್ಲಿ ಈ ಐವರು ವ್ಯಕ್ತಿಗಳ ಹೆಸರು ಪ್ರಸ್ತಾಪ ಆಗಿದೆ.
ತುಮಕೂರಿನ ಶಿರಾಗೇಟ್ ಸಮೀಪದ ಫಾರ್ಮ್ ಹೌಸ್ ನಲ್ಲಿ ಸಂಚು ರೂಪಿಸಿರುವ ಆರೋಪಿಗಳು, ನವೆಂಬರ್ 15 ರಂದು ರಾಜೇಂದ್ರ ಮನೆಗೆ ಬಂದಿದ್ದ ಹಂತಕರು. ರಾಜೇಂದ್ರ ಮಗಳ ಬರ್ತ್ ಡೇಗೆ ಶಾಮಿಯಾನ ಹಾಕಲು ಕಾರ್ಮಿಕರ ಸೊಗಿನಲ್ಲಿ ಮನೆ ಪ್ರವೇಶಿಸಿದ್ದರು.
ಕ್ಯಾತಸಂದ್ರ ಬಳಿ ಇರುವ ಮನೆಗೆ ಬಂದಿದ್ದ ಆಗುಂತಕರು., ಹತ್ಯೆ ಮಾಡುವ ಉದ್ದೇಶದಿಂದಲ್ಲೇ ಮನೆಗೆ ಬಂದಿದ್ದರು. ಹತ್ಯೆ ಮಾಡಲು ಸಾಧ್ಯವಾಗದಿದ್ದಕ್ಕೆ ರಾಜೇಂದ್ರ ಕಾರಿಗೆ ಜಿಪಿಆರ್ ಎಸ್ ಆಳವಡಿಸಲು ಸಂಚು ರೂಪಿಸಿದ್ರು. ರಾಜೇಂದ್ರ ಹತ್ಯೆ ಮಾಡಲು ಶಸ್ತ್ರಾಸ್ತ್ರ ಗಳನ್ನ ಸಂಗ್ರಹಿಸಿದ್ದ ಹಂತಕರು, ಜೊತೆಗೆ ಕಾರನ್ನ ಖರೀದಿಸಿದ್ದರು. ರಾಜೇಂದ್ರನನ್ನ ಹಿಂಬಾಲಿಸಿದ್ದ ಆರೋಪಿ ಬೆಂಬಲಿಗರು. ಬೆಂಗಳೂರಿನ ಕಲಾಸಿಪಾಳ್ಯ, ಮಧುಗಿರಿಯಲ್ಲಿ ರಾಜೇಂದ್ರನನ್ನ ಹಿಂಬಾಲಿಸಿದ್ದರು.
ರಾಜೇಂದ್ರ ಹಾಗೂ ತಂದೆ ರಾಜಣ್ಣ ರಾಜಕೀಯವಾಗಿ ಪ್ರಬಲವಾಗಿದ್ದು, ಸಿಎಂ ಸಿದ್ದರಾಮಯ್ಯಗೆ ಆಪ್ತರಾಗಿದ್ದ, ಇವರ ಮೇಲೆ ರಾಜಕೀಯ ದ್ವೇಷ ಹೊಂದಿದ್ದು, ಬೆದರಿಕೆ, ಒಳಸಂಚು, ಆಮಿಷ ಮಾರ್ಗದಿಂದ ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿದ್ದು, ಹೆಚ್ಚಿನ ಪೊಲೀಸ್ ಭದ್ರತೆಯನ್ನು ರಾಜೇಂದ್ರ ಕೋರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4