ಬಹಳ ಹಿಂದೆ, ಒಮ್ಮೆ ಒಂದು ಪುಟ್ಟ ಹಣತೆ ಸೂರ್ಯದೇವನನ್ನು ಕುರಿತು ಕೇಳಿತು, “ಹೇ… ಸೂರ್ಯದೇವ ಪ್ರತಿದಿನದ ನಿನ್ನ ಅಸ್ತಂಗತದ ನಂತರ ನಾನು ಪ್ರತಿ ಮನೆಯಲ್ಲೂ ಬೆಳಗುವೆ, ಆದರೆ ನಿನ್ನ ಹಾಗೆ ಸರ್ವ ದಿಕ್ಕುಗಳನ್ನೂ ಏಕಕಾಲದಲ್ಲಿ ಬೆಳಗಲು ಆಗುತ್ತಿಲ್ಲ ನನ್ನ ಬುಡದಲ್ಲಿ ಯಾವಾಗಲೂ ಕತ್ತಲೆಯೇ ಆವರಿಸಿರುವುದು ಇದಕ್ಕೆ ಏನು ಮಾಡಲಿ ಪರಿಹಾರ ತಿಳಿಸು” ಎಂದಾಗ, ಸೂರ್ಯದೇವ ಹೇಳಿದನು…
“ಮಿತ್ರ ಕೊರಗಬೇಡ ನಾನೂ ಏನು ಸರ್ವ ಶಕ್ತನಲ್ಲ ನನ್ನ ಬೆನ್ನ ಹಿಂದೆ ನನಗಿಂತ ಆಧಿಕ ಪ್ರಕಾಶಮಾನವಾದ ನಕ್ಷತ್ರ ಒಂದು ಬಂದು ನಿಂತರೆ ನನಗೂ ಕೂಡ ನನ್ನ ಮುಂದೆ ನೆರಳ ಛಾಯೆ ಮೂಡುವುದು ಎಂದಾಗ ಹಣತೆ ಅದು ಹೇಗೆ ಎಂದಾಗ ಸೂರ್ಯದೇವ ನೋಡು ಮಿತ್ರ ನೀನು ಪ್ರಜ್ವಲಿಸುತ್ತಿರುವಾಗ ನಿನ್ನ ಬೆನ್ನ ಹಿಂದೆ ಒಂದು ಅಧಿಕ ಪ್ರಕಾಶಮಾನವಾದ ಪಂಜನ್ನು ಬೆಳಗಿಸಿದರೆ ನಿನ್ನ ಪ್ರಜ್ವಲಿಸುವ ಜ್ಯೋತಿಯ ಛಾಯೆ ಕೂಡ ಮುಂದೆ ಒಂದು ತಡೆ ಗೋಡೆಯ ಮೇಲೆ ನೆರಳಾಗಿ ಕಾಣುವುದು. ಸ್ವತಹ ಜ್ಯೋತಿಯೇ ಕೂಡ ನೆರಳಾಗಿ ಕಾಣುವಾಗ ಇನ್ನು ಸೃಷ್ಟಿಕರ್ತ ಭಗವಂತನ ಮುಂದೆ ಎಲ್ಲವೂ ಯಾವ ಲೆಕ್ಕ? ಹಾಗಾಗಿ ಈ ಜಗತ್ತಿನಲ್ಲಿ ಯಾರೂ ಕೂಡ ಸರ್ವ ಶಕ್ತರಲ್ಲ, ಎಲ್ಲರೂ ಎಲ್ಲರಿಗಿಂತ ಅಧಿಕ ದೊಡ್ಡವರು ಮತ್ತು ಎಲ್ಲರೂ ಎಲ್ಲರಿಗಿಂತ ಅಧಿಕ ಚಿಕ್ಕವರೇ ಆಗುವರು, ಎಲ್ಲರೂ ಭಗವಂತನ ಆಜ್ಞಾನುಸಾರ ಅವರವರ ಕಾರ್ಯಗಳಲ್ಲಿ ಮಗ್ನರಾಗಿರುವರು…”
“ಎಲ್ಲವೂ ಭಗವಂತನ ಪೂರ್ವ ಯೋಜಿತ ಕ್ರಿಯೆ ಅಷ್ಟೇ, ನೀನು ಮರುಗದೆ ನಿನ್ನ ಕರ್ತವ್ಯವನ್ನು ನಿಭಾಯಿಸು, ನಾನೂ ಕೂಡ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ. ಒಂದಲ್ಲಾ ಒಂದು ದಿನ ಎಲ್ಲವೂ ಭಗವಂತನ ಸೃಷ್ಟಿ ಅನುಸಾರ ಬದಲಾಗುವುದು, ಬದಲಾವಣೆ ಸೃಷ್ಟಿಯ ನಿಯಮ, ಅವನ ಪೂರ್ವ ಯೋಜನೆಯನ್ನು ಯಾರಿಂದಲೂ, ಯಾವ ಜ್ಞಾನದಿಂದಲೂ ಅರಿಯಲು ಮತ್ತು ಹೇಳಲು ಸಾಧ್ವವಿಲ್ಲ ಎಂದಾಗ ಹಣತೆ ನಿನ್ನ ಮಾತು ಸತ್ಯ ಸೂರ್ಯದೇವ ನಾನು ಇನ್ನು ಮುಂದೆ ಕೊರಗದೆ ನಾನು ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ ಎಂದು ಒಮ್ಮೆ ಸೂರ್ಯದೇವನಿಗೆ ನಮಿಸಿ ತನ್ನ ಕಾರ್ಯದಲ್ಲಿ ತೊಡಗಿತು.
ವಿಶೇಷ ಓದುಗರಿಗೆ,
ಈ ಕಥೆ ನಿಮ್ಮ ಮನಸ್ಸಿಗೆ ಸ್ಪರ್ಶಿಸಲಿ ಮತ್ತು ಜೀವನದ ಪಯಣದಲ್ಲಿ ಪ್ರೇರಣೆಯಾಗಿ ಪರಿಣಮಿಸಲಿ ಎಂಬುದು ನಮ್ಮ ಆಶಯ. ಜೀವನದಲ್ಲಿ ಎಲ್ಲರೂ ತಮ್ಮದೇ ಆದ ಹಾದಿಯಲ್ಲಿ ಸಾಗುತ್ತಿದ್ದಾರೆ. ಪ್ರತಿ ಅಡಚಣೆ, ಪ್ರತಿ ದುರ್ಬಲತೆ, ಮತ್ತು ಪ್ರತಿ ಪ್ರಶ್ನೆಯೂ ನಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿ ರೂಪಿಸುತ್ತವೆ.
ಹಣತೆಯ ಅನುಭವವೂ ಇದೇ ಸಂದೇಶವನ್ನು ನೀಡುತ್ತದೆ—ಯಾರೂ ಪರಿಪೂರ್ಣರು ಅಲ್ಲ. ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ನೆರವೇರಿಸಿದಾಗಲೇ ಸತ್ಯ ಯಶಸ್ಸು ದೊರೆಯುತ್ತದೆ. ಸೂರ್ಯದೇವನ ಶಾಂತ ಪಾಠದಿಂದ, ಬದುಕಿನ ಸವಾಲುಗಳನ್ನು ನಿಭಾಯಿಸುವ ಧೈರ್ಯವನ್ನು ಪಡೆದು ಮುನ್ನಡೆಯೋಣ.
ನಿಮ್ಮ ಪ್ರತಿಯೊಂದು ಹೆಜ್ಜೆಯೂ ನಂಬಿಕೆ ಮತ್ತು ಜ್ಞಾನದ ಬೆಳಕಿನಲ್ಲಿ ಮುನ್ನಡೆಯಲಿ. ಈ ಕಥೆಯು ನಿಮ್ಮ ಹೃದಯದಲ್ಲಿ ನಿತ್ಯವೂ ಪ್ರೇರಣೆಯ ಜ್ಯೋತಿಯಾಗಿರಲಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx